ನಮ್ಮ ಬಗ್ಗೆ

ಕೇಂದ್ರ ಪರಿಹಾರ ಸಮಿತಿ

 

 ರಾಜ್ಯದಲ್ಲಿ   ಭಿಕ್ಷಾಟನೆಯನ್ನು  ತಡೆಗಟ್ಟುವ  ಉದ್ದೇಶದಿಂದ  ಅಂದಿನ  ಮೈಸೂರು  ಸಂಸ್ಥಾನದ  ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ರವರು ಸರ್ಕಾರದ ಆದೇಶ ಸಂಖ್ಯೆ:ಪಿ:4339 ದಿ.9-12-1944 ರಲ್ಲಿ ಬೆಂಗಳೂರು - ಮಾಗಡಿ ಮುಖ್ಯರಸ್ತೆಯ ಶ್ರೀಗಂಧದಕಾವಲು ಹಾಗೂ ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂಬರ್‍ಗಳಲ್ಲಿ 300.03 ಎಕರೆ  ಜಮೀನನ್ನು  ಮಂಜೂರು ಮಾಡಿ ಆದೇಶ ಹೊರಡಿಸಿದೆ. ದಿ:01.07.1948 ರಲ್ಲಿ ಕಟ್ಟಡಗಳ ಶಂಕುಸ್ಥಾಪನೆ ಮಾಡಿ  ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭ ಮಾಡಲಾಗಿದೆ. ನಂತರ ಸರ್ಕಾರದ ಆದೇಶ ಸಂಖ್ಯೆ:ಆರ್‍ಡಿ 238/ಎಕ್ಯೂಬಿ 76 ದಿ.06.12.1976 ರಲ್ಲಿ ಶ್ರೀಗಂಧಕಾವಲು ಗ್ರಾಮದ 8 ಎಕರೆ ಜಮೀನನ್ನು ನಿರಾಶ್ರಿತರ ಪರಿಹಾರ ಕೇಂದ್ರಕ್ಕಾಗಿ ಸರ್ಕಾರವು ಮಂಜೂರು ಮಾಡಿ ಆದೇಶ ಹೊರಡಿಸಿದ್ದು,  ಒಟ್ಟು 308.03 ಎಕರೆ ಜಮೀನನ್ನು ನೀಡಲಾಗಿದೆ. ಈ ಪೈಕಿ 85.07 ಎಕರೆ ಜಮೀನನ್ನು ವಿವಿಧ ಇಲಾಖಾ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಗುತ್ತಿಗೆ ನೀಡಲಾದ 16.01 ಎಕರೆ ಜಮೀನು ಸೇರಿದಂತೆ, ಪ್ರಸ್ತುತ ಒಟ್ಟು 222.36 ಎಕರೆ ಜಮೀನು ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿದೆ.     

 

 ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಭಿಕ್ಷಾಟನಾ ನಿಷೇಧ ಕಾಯಿದೆ1975 ಜಾರಿಯಲ್ಲಿದ್ದು, ಭಿಕ್ಷಾಟನೆಯನ್ನು ನಿಷೇಧಿಸಲಾಗಿದೆ. ಸರ್ಕಾರದ ಅಧಿಸೂಚನೆ ಸಂಖ್ಯೆ:ಎಸ್.ಡಬ್ಲ್ಯುಡಿ:15:ಎಸ್‍ಬಿಆರ್:97 ದಿನಾಂಕ:28-08-1997 ರಲ್ಲಿ ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ ಕಾಯಿದೆಯನ್ನು  ದಿನಾಂಕ:28-08-1997 ರಿಂದ ಜಾರಿಗೆ ಬರುವಂತೆ, ರಾಜ್ಯಾದಾದ್ಯಂತ ವಿಸ್ತರಿಸಿದೆ. ಆ ಮೇರೆಗೆ ಭಿಕ್ಷಾಟನೆಯಲ್ಲಿ  ನಿರತರಾದ ವ್ಯಕ್ತಿಗಳನ್ನು  ಕಾಯ್ದೆಯಡಿ ಬಂಧಿಸಿ, ನಿಯಮಾನುಸಾರ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿರಿಸಿ  ಪರಿಹಾರ/ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

 

ಕರ್ನಾಟಕ ಭಿಕ್ಷಾಟನಾ ನಿಷೇಧ ಕಾಯ್ದೆ 1975 ಸೆಕ್ಷನ್(31) ರನ್ವಯ ಸ್ಥಳೀಯ ಸಂಸ್ಥೆಗಳು ಭೂಮಿ ಮತ್ತು ಕಟ್ಟಡಗಳ ಮೇಲೆ ವಿಧಿಸುವ ತೆರಿಗೆಗಳಲ್ಲಿ  3% ಭಿಕ್ಷುಕರ ಕರ ವಸೂಲಾತಿ ಆದ ಬಾಬ್ತಿನಲ್ಲಿ  ಶೇ.10 ವಸೂಲಾತಿ ವೆಚ್ಚವನ್ನು ಕಡಿತಗೊಳಿಸಿ,  ಅನಂತರ ಪಾವತಿಸುವ ಭಿಕ್ಷುಕರ ಕರದ ಹಣದಿಂದ ಈ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು  ನಿರ್ವಹಿಸಲಾಗುತ್ತದೆ.

 

​ ಸರ್ಕಾರದ ಅಧಿಸೂಚನೆ ಸಂಖ್ಯೆ:ಎಸ್‍ಡಬ್ಲ್ಯುಡಿ:15:ಎಸ್.ಬಿ.ಆರ್​:97 ದಿನಾಂಕ:24-03-20​00 ರಲ್ಲಿ ರಾಜ್ಯಾದಾದ್ಯಂತ ದಿನಾಂಕ:01-04-2000 ರಿಂದ ಜಾರಿಗೆ ಬರುವಂತೆ ಭಿಕ್ಷುಕರ ಕರವನ್ನು  ವಿಧಿಸಿ ಸ್ಥಳೀಯ ಸಂಸ್ಥೆಗಳಿಂದ ವಸೂಲಿ ಮಾಡಿ ಕೇಂದ್ರ ಪರಿಹಾರ ಸಮಿತಿಗೆ ಜಮಾ ಮಾಡಲು ಸೂಚಿಸಲಾಗಿದೆ.

 

​ ಹಾಲಿ ರಾಜ್ಯದ್ಯಂತ ಬೆಂಗಳೂರು ಸೇರಿದಂತೆ ವಿಜಯಪುರ, ಬಳ್ಳಾರಿ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಕಲ್ಬುರ್ಗಿ, ಹು-ಧಾರವಾಡ, ಕೋಲಾರ, ಮೈಸೂರು, ಮಂಗಳೂರು (ದ.ಕ), ರಾಯಚೂರು, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಿಕ್ಷುಕರ/ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ.

 

ಸರ್ಕಾರಿ ಆದೇಶ ಸಂಖ್ಯೆ:ಸಕಇ 07 ಎಸ್‍ಬಿಆರ್ 2017 ಬೆಂಗಳೂರು.ದಿನಾಂಕ:21.04.2017 ರಲ್ಲಿ ಚಾಮರಾಜನಗರ, ಹಾಸನ, ಹಾವೇರಿ, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ  ಹೆಚ್ಚುವರಿಯಾಗಿ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಹೊಸದಾಗಿ ಪ್ರಾರಂಭಿಸಲು ಸರ್ಕಾರ ಮಂಜೂರಾತಿ  ನೀಡಿ ಆದೇಶಿಸಿದೆ.

 

 

ಇತ್ತೀಚಿನ ನವೀಕರಣ​ : 22-10-2020 05:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೇಂದ್ರ ಪರಿಹಾರ ಸಮಿತಿ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ