ಆಡಳಿತ

ಕರ್ನಾಟಕ ಸರ್ಕಾರ
ಸಮಾಜ ಕಲ್ಯಾಣ ಇಲಾಖೆ
ಕೇಂದ್ರ ಪರಿಹಾರ ಸಮಿತಿ

ಕಛೇರಿಯ ವಿಳಾಸ:
ಕಾರ್ಯದರ್ಶಿಗಳ ಕಛೇರಿ, ಕೇಂದ್ರ ಪರಿಹಾರ ಸಮಿತಿ, ನಿರಾಶ್ರಿತರ ಪರಿಹಾರ ಕೇಂದ್ರದ ಆವರಣ, ಮಾಗಡಿ ಮುಖ್ಯರಸ್ತೆ,
ಬೆಂಗಳೂರು-560091 , ದೂರವಾಣಿ: 080-29556626, 29554646,
E-Mail:crcbng@yahoo.co.in  : Website: www.karnataka.gov.in\crcbng

            ಕೇಂದ್ರ ಪರಿಹಾರ ಸಮಿತಿಯು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಆಡಳಿತಕ್ಕೆ ಒಳಪಟ್ಟಿರುತ್ತದೆ.  ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ ಸೆಕ್ಷನ್ 4 (2) ರನ್ವಯ  ಸಮಿತಿಯು ಕೆಳಕಂಡ ಅಧಿಕಾರಿ/ಸದಸ್ಯರನ್ನು ಒಳಗೊಂಡಿರುತ್ತದೆ. ಸಮಿತಿಯು ರಾಜ್ಯದಲ್ಲಿರುವ ಎಲ್ಲಾ ನಿರಾಶ್ರಿತರ ಪರಿಹಾರ ಕೇಂದ್ರಗಳ ಆಡಳಿತ ನಿರ್ವಹಣೆ ಮತ್ತು ಮೇಲುಸ್ತುವಾರಿಯ ಜವಾಬ್ದಾರಿಯನ್ನು ಹೊಂದಿರುತ್ತದೆ.   

 

1 ಸರ್ಕಾರದ ಪ್ರಧಾನ ಕಾರ್ಯದರ್ಶಿ,ಸಮಾಜ ಕಲ್ಯಾಣ ಇಲಾಖೆ   ಸದಸ್ಯರು
2 ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಸದಸ್ಯರು
3 ಸರ್ಕಾರದ  ಕಾರ್ಯದರ್ಶಿ, ಆರ್ಥಿಕ ಇಲಾಖೆ  ಸದಸ್ಯರು
4 ಸರ್ಕಾರದಿಂದ ನಾಮನಿರ್ದೇಶಿತರಾದ ಸರ್ಕಾರೇತರ ಸದಸ್ಯರು 04 ಸದಸ್ಯರು

      ಮೇಲ್ಕಾಣಿಸಿದ ಸಮಿತಿಯ ಸದಸ್ಯರ ಪೈಕಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸುತ್ತದೆ.  

 

 

ಶ‍್ರೀ ಕುಮಾರ್ ನಾಯ್ಕ್, ಭಾ.ಆ.ಸೇ.,

ಸಮಾಜ ಕಲ್ಯಾಣ ಇಲಾಖೆ ಹಾಗೂ

ಅಧ್ಯಕ್ಷರು, ಕೇಂದ್ರ ಪರಿಹಾರ ಸಮಿತಿ

ಬೆಂಗಳೂರು

ಯು.ಚಂದ್ರನಾಯಕ್,  ಕೆ.ಜಿ.ಎಸ್.,

ಕಾರ್ಯದರ್ಶಿ,
ಕೇಂದ್ರ ಪರಿಹಾರ ಸಮಿತಿ,
ಬೆಂಗಳೂರು.

 

ಸಮಾಜ ಕಲ್ಯಾಣ ಇಲಾಖೆಯ ಹಿರಿಯ ವೇತನ ಶ್ರೇಣಿಯ ಜಂಟಿ ನಿರ್ದೇಶಕರನ್ನು ಕಾರ್ಯದರ್ಶಿಗಳಾಗಿ ನೇಮಕಮಾಡಲು ಅವಕಾಶವಿದ್ದು,  ಪ್ರಸ್ತುತ ಶ್ರೀ ಯು.ಚಂದ್ರಾನಾಯಕ್, ಕ.ಸಾ.ಸೇ., ಅಪರ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರನ್ನು ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದ್ದು, ದಿನಾಂಕ 12-07-2019 ರಂದು ಕಾರ್ಯಭಾರ ವಹಿಸಿಕೊಂಡಿರುತ್ತಾರೆ.

  ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ಪರಿಹಾರ ಸಮಿತಿಗಳು

ಕೇಂದ್ರ ಪರಿಹಾರ ಸಮಿತಿಯ ಆಡಳಿತ ವ್ಯಾಪ್ತಿಯಲ್ಲಿ ಜಿಲ್ಲಾ ಮಟ್ಟದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರಗಳ ಆಡಳಿತ ವ್ಯವಸ್ಥೆಗೆ ಅಧಿನಿಯಮದ ಕಲಂ 5 ರನ್ವಯ ಸ್ಥಳೀಯ ಪರಿಹಾರ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ ಹಾಗೂ   ಜಂಟಿ/ಉಪನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ, ಸ್ಥಳೀಯ ಪರಿಹಾರ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಸ್ಥಳೀಯ ಸಮಿತಿಯಲ್ಲಿ ಪೂರಕವಾದ ಸಂಪರ್ಕ ಅಗತ್ಯವಿರುವ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡಂತೆ ಕನಿಷ್ಠ 08 ಮತ್ತು ಗರಿಷ್ಠ 12 ಸದಸ್ಯರನ್ನು ಕೇಂದ್ರ ಪರಿಹಾರ ಸಮಿತಿಯಿಂದ ನೇಮಕ ಮಾಡಲಾಗುತ್ತದೆ. ಸ್ಥಳೀಯ ಪರಿಹಾರ ಸಮಿತಿಯ ಸದಸ್ಯರ ವಿವರ ಈ ಕೆಳಕಂಡಂತಿದೆ.

ಕ್ರ.ಸಂ

                ವಿವರ   

ಅಧ್ಯಕ್ಷರು/ಸದಸ್ಯರು

1 ಜಿಲ್ಲಾಧಿಕಾರಿಗಳು.
ಅಧ್ಯಕ್ಷರು
2 ಆಯುಕ್ತರು, ನಗರಸಭೆ ಅಥವಾ ಅವರಿಂದ ನಾಮನಿರ್ದೇಶಿತರು ಸದಸ್ಯರು
3 ಆರಕ್ಷಕ ಆಯುಕ್ತರು ಅಥವಾ ಅವರಿಂದ ನಾಮನಿರ್ದೇಶಿತರು ಸದಸ್ಯರು
4 ಜಿಲ್ಲಾ ಆರೋಗ್ಯಾಧಿಕಾರಿಗಳು ಅಥವಾ ಅವರಿಂದ ನಾಮನಿರ್ದೇಶಿತರು ಸದಸ್ಯರು
5 ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಅಥವಾ ಅವರಿಂದ ನಾಮನಿರ್ದೇಶಿತರು ಸದಸ್ಯರು
6 ಜಂಟಿ ನಿರ್ದೇಶಕರು, ಕೈಗಾರಿಕೆ & ವಾಣಿಜ್ಯ ಇಲಾಖೆ ಅಥವಾ ಅವರಿಂದ ನಾಮನಿರ್ದೇಶಿತರು ಸದಸ್ಯರು
7 ಉಪ ನಿರ್ದೇಶಕರು, ತೋಟಗಾರಿಕೆ ಅಥವಾ ಅವರಿಂದ ನಾಮನಿರ್ದೇಶಿತರು ಸದಸ್ಯರು
8

ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಥವಾ ಅವರಿಂದ ನಾಮನಿರ್ದೇಶಿತರು      

ಸದಸ್ಯರು
9

ಸರ್ಕಾರಿ ವಕೀಲರು, ಸಂಬಂದಪಟ್ಟ ಜಿಲ್ಲೆ

(ಜಿಲ್ಲಾಧಿಕಾರಿಗಳಿಂದ ನಾಮನಿರ್ದೇಶಿತರು)

ಸದಸ್ಯರು
10 ತಾಲ್ಲೂಕು ದಂಡಾಧಿಕಾರಿಗಳು, ಸಂಬಂಧಪಟ್ಟ ಜಿಲ್ಲೆ ಕೇಂದ್ರಸ್ಥಾನ ಸದಸ್ಯರು
11 ಜಂಟಿ ನಿರ್ದೇಶಕರು/ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಸದಸ್ಯರು/ಸದಸ್ಯ ಕಾರ್ಯದರ್ಶಿ

ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರವು ಕೇಂದ್ರ ಪರಿಹಾರ ಸಮಿತಿಯ ನೇರ ನಿಯಂತ್ರಣದಲ್ಲಿರುತ್ತದೆ. ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಗ್ರೂಪ್-ಎ ಶ್ರೇಣಿಯ ಅಧೀಕ್ಷಕರು ಮತ್ತು ಉಳಿದ 13 ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಗ್ರೂಪ್-ಬಿ ಹುದ್ದೆಯ ಪತ್ರಾಂಕಿತ ಅಧಿಕಾರಿಗಳು ಅಧೀಕ್ಷಕರಾಗಿ ಸಂಸ್ಥೆಯ ಎಲ್ಲಾ ಚಟುವಟಿಕೆಗಳ ಮೇಲ್ವಿಚಾರಕರಾಗಿ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಾರೆ.

ಇತ್ತೀಚಿನ ನವೀಕರಣ​ : 02-03-2020 12:07 PM ಅನುಮೋದಕರು: Admin