ಅಭಿಪ್ರಾಯ / ಸಲಹೆಗಳು

ನಿರಾಶ್ರಿತರ ಸಂಖ್ಯಾಬಲ

ಕೇಂದ್ರ ಪರಿಹಾರ ಸಮಿತಿ

ಮಾಗಡಿ ಮುಖ್ಯ ರಸ್ತೆ, ಬೆಂಗಳೂರು.

 

ನಿರಾಶ್ರಿತರ ಪರಿಹಾರ ಕೇಂದ್ರಗಳ ಪ್ರಾರಂಭ, ನಿರಾಶ್ರಿತರಿಗೆ ‌ಸ್ಥಳವಕಾಶ ಹಾಗೂ ಕೇಂದ್ರಗಳ ವ್ಯಾಪ್ತಿಗೊಳಪಡುವ ಇತರೆ ಜಿಲ್ಲೆಗಳ ವಿವರ

 

 ಸರ್ಕಾರದ ಆದೇಶ ಸಂಖ್ಯೆ: ಎಸ್‍ಡಬ್ಲ್ಯೂಡಿ 5 ಎಸ್‍ಬಿಆರ್ 76 ದಿ.26.3.1976 ರಲ್ಲಿ 10 ನಿರಾಶ್ರಿತರ ಪರಿಹಾರ ಕೇಂದ್ರಗಳು ಹಾಗೂ  ಸರ್ಕಾರದ ಆದೇಶ ಸಂಖ್ಯೆ: ಸಕಇ 7 ಎಸ್‍ಬಿಆರ್ 99 ದಿ: 29-04-2000 ರಲ್ಲಿ 04 ನಿರಾಶ್ರಿತರ ಪರಿಹಾರ ಕೇಂದ್ರಗಳು ಒಟ್ಟು 14 ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಿ ನಿರ್ವಹಣೆ ಮಾಡಲಾಗುತ್ತಿದೆ.

 

 

ಕ್ರ.ಸಂ

ಜಿಲ್ಲಾ ನಿರಾಶ್ರಿತರ ಪರಿಹಾರ ಕೇಂದ್ರಗಳು

ನಿರಾಶ್ರಿತರ ಪರಿಹಾರ ಕೇಂದ್ರಗಳ ವ್ಯಾಪ್ತಿಗೊಳಪಡುವ ಇತರೆ ಜಿಲ್ಲೆಗಳು     

ನಿರಾಶ್ರಿತರನ್ನು ಇರಿಸಲು

ಕಲ್ಪಿಸಲಾದ ಸ್ಥಳಾವಕಾಶ

ಮೂಲಭೂತ ಸೌಕರ್ಯಗಳು

ಎಸ್‍ಡಬ್ಲ್ಯೂಡಿ 5 ಎಸ್‍ಬಿಆರ್ 76 ದಿ.26-03-1976            

1 ಬೆಂಗಳೂರು   ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, 800     

ಎಲ್ಲಾ ನಿರಾಶ್ರಿತರ ಪರಿಹಾರ ಕೇಂದ್ರಗಳು ಮೂಲಭೂತ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡಗಳನ್ನು ಹೊಂದಿರುತ್ತವೆ.         

2 ಹುಬ್ಬಳ್ಳಿ-ಧಾರವಾಡ   ಹು-ಧಾರವಾಡ, ಹಾವೇರಿ, ಗದಗ  175    
3 ಮೈಸೂರು   ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು 500   
4 ದಕ್ಷಿಣ ಕನ್ನಡ  ದಕ್ಷಿಣ ಕನ್ನಡ, ಉಡುಪಿ   100   
5 ಬೆಳಗಾವಿ  ಬೆಳಗಾವಿ, ಉತ್ತರಕನ್ನಡ  100 
6 ಕಲ್ಬುರ್ಗಿ  ಕಲ್ಬುರ್ಗಿ, ಬೀದರ್   150
7 ಬಳ್ಳಾರಿ ಬಳ್ಳಾರಿ, ಕೊಪ್ಪಳ  200     
8 ದಾವಣಗೆರೆ  ದಾವಣಗೆರೆ  250   
9 ವಿಜಯಪುರ ವಿಜಯಪುರ, ಬಾಗಲಕೋಟೆ 175  
10 ಶಿವಮೊಗ್ಗ ಶಿವಮೊಗ್ಗ, ಚಿಕ್ಕಮಗಳೂರು   300    
ಸಕಇ 7 ಎಸ್‍ಬಿಆರ್ 99 ದಿ.29-04-2000                
11 ತುಮಕೂರು  ತುಮಕೂರು, ಹಾಸನ 500       
12 ಕೋಲಾರ   ಕೋಲಾರ, ಚಿಕ್ಕಬಳ್ಳಾಪುರ 100    
13 ಚಿತ್ರದುರ್ಗ ಚಿತ್ರದುರ್ಗ    300     
14 ರಾಯಚೂರು ರಾಯಚೂರು 150    
     ಒಟ್ಟು 3800        

                                  

ಸರ್ಕಾರಿ ಆದೇಶ ಸಂಖ್ಯೆ: ಸಕಇ: 07: ಎಸ್‍ಬಿಆರ್: 2017 ಬೆಂಗಳೂರು ದಿನಾಂಕ:21-04-2017 ರಲ್ಲಿ ಚಾಮರಾಜನಗರ, ಹಾಸನ, ಹಾವೇರಿ, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ  ಹೆಚ್ಚುವರಿಯಾಗಿ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಹೊಸದಾಗಿ ಪ್ರಾರಂಭಿಸಲು ಸರ್ಕಾರ ಮಂಜೂರಾತಿ  ನೀಡಿ ಆದೇಶಿಸಿದೆ.

 

ಚಾಮರಾಜನಗರ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ:ಎಲ್‍ಎನ್‍ಡಿ/ಸಿಆರ್ 147 :15-16 ದಿನಾಂಕ: 09.2.2016 ಚಾಮರಾಜನಗರ ಚಾಮರಾಜನಗರ ಜಿಲ್ಲೆ ಹಾಗೂ ತಾಲ್ಲೂಕಿನ ಯಡಪುರಗ್ರಾಮದ ಸರ್ವೆ 341 ರಲ್ಲಿ 5.05 ಎಕರೆ  ಜಮೀನು ಮಂಜೂರು ಮಾಡಿದ್ದು, ನಿರಾಶ್ರಿತರ ಪರಿಹಾರ ಕೇಂದ್ರ  ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ. ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.

 

ಹಾಸನ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ: ಎಲ್‍ಎನ್‍ಡಿ(1) 07 ದಿ: 28-6-2016 ಹಾಸನ  ದಿನಾಂಕ: 28.6.2016 ರ ಆದೇಶದಲ್ಲಿ ಹಾಸನ ಜಿಲ್ಲೆ ಹಾಸನ ತಾ|| ಕಟ್ಟಾಯ ಹೋಬಳಿ ಗೋಳೆನಹಳ್ಳಿ ಗ್ರಾಮದ ಸರ್ವೆ ನಂ 27 ರಲ್ಲಿ 5 ಎಕರೆ ಜಮೀನು ಮಂಜೂರಾಗಿದ್ದು, ಪ್ರಸಕ್ತ ಸಾಲಿನಲ್ಲಿ ನಿರಾಶ್ರಿತರ ಪರಿಹಾರ ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ.

 

ಕೊಪ್ಪಳ ಜಿಲ್ಲಾಧಿಕಾರಿಗಳು, ಕೊಪ್ಪಳ ಜಿಲ್ಲೆ ಇವರ ಆದೇಶ ಸಂಖ್ಯೆ: ಕಂದಾಯ/ ಭೂಮಿ/ 28/ 119/ 2018/ ಕ.ಸಂ/ 20772/ 4447 ದಿ: 19-12-2018 ರಲ್ಲಿ ಕೊಪ್ಪಳ ತಾಲ್ಲೂಕಿನ ಹಿರೇಕಾಸನಕಂಡಿ ಗ್ರಾಮದ ಪರಂಪೋಕ ಸರ್ವೆ ನಂ 13/ಪಿ2 ವಿಸ್ತೀರ್ಣ 191.20 ಎಕರೆ ಜಮೀನಿನ ಪೈಕಿ 05 ಎಕರೆ ಜಮೀನನ್ನು ಭಿಕ್ಷುಕರ ಪುನರ್ವಸತಿ ಕಟ್ಟಡ ನಿಮಾರ್ಣಕ್ಕಾಗಿ ಮಂಜೂರು ಮಾಡಲಾಗಿದೆ. 

 

 ಹಾವೇರಿ ಜಿಲ್ಲೆಯಲ್ಲಿ ಹೊಸದಾಗಿ ನಿರಾ‍ಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲು ಜಮೀನು ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಮೀನು ಮಂಜೂರಾದ ಕೂಡಲೇ ಕ್ರಮವಹಿಸಲಾಗುವುದು.

 

ಯಾದಗಿರಿ ಜಿಲ್ಲಾಧಿಕಾರಿಗಳು ಯಾದಗಿರಿ ಜಿಲ್ಲೆ ರವರ ಆದೇಶ ಸಂಖ್ಯೆ: ಕಂ/ ಭೂಮಂ/ 40/ 2019-20/ 1702  ದಿ: 10.10.2019 ರಲ್ಲಿ ಯಾದಗಿರಿ ಜಿಲ್ಲೆಯ ಶಾಹಪೂರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಸರ್ವೆ 419 ರಲ್ಲಿ 10.00 ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ನಿರಾಶ್ರಿತರ ಪರಿಹಾರ ಕೇಂದ್ರ ಪ್ರಾರಂಭಿಸಲು ಕ್ರಮವಹಿಸಲಾಗುವುದು.

 

ಬೀದರ್ ಜಿಲ್ಲಾಧಿಕಾರಿಗಳು, ಬೀದರ್ ಜಿಲ್ಲೆ ರವರ ಆದೇಶ ಸಂಖ್ಯೆ:ಸಂ.ಕಂ.ಎಲ್.ಎನ್.ಡಿ/ಸಿಆರ್: 175: 2017-18/ 17328 ದಿ: 19.01.2018 ರಲ್ಲಿ ಬೀದರ್ ತಾಲ್ಲೂಕು ಘೋಡಂಪಳ್ಳಿ ಗ್ರಾಮದ ಸರ್ವೆ ನಂ 15 ರಲ್ಲಿ 7 ಎಕರೆ 10ಗುಂಟೆ ಜಮೀನನ್ನು ಮಂಜೂರು ಮಾಡಲಾಗಿದ್ದು, ಸರ್ಕಾರದ ಆದೇಶ ಪಡೆದು ನಿರಾಶ್ರಿತರ ಪರಿಹಾರ ಕೇಂದ್ರ ಪ್ರಾರಂಭಿಸಲು ಕ್ರಮವಹಿಸಲಾಗುವುದು.

 

ಇತ್ತೀಚಿನ ನವೀಕರಣ​ : 13-08-2021 01:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೇಂದ್ರ ಪರಿಹಾರ ಸಮಿತಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080