ಅಭಿಪ್ರಾಯ / ಸಲಹೆಗಳು

ಮೂಲೋದ್ದೇಶಗಳು

ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 

 

ರಾಜ್ಯದಲ್ಲಿ ಭಿಕ್ಷಾಟನೆಯನ್ನು ತಡೆಗಟ್ಟುವ ಉದ್ದೇಶದಿಂದ ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ರವರು ಸರ್ಕಾರದ ಆದೇಶ ಸಂಖ್ಯೆ:ಪಿ:4339 ದಿ.9-12-1944 ರಲ್ಲಿ ಬೆಂಗಳೂರು, ಮಾಗಡಿ ಮುಖ್ಯ ರಸ್ತೆಯ ಶ್ರೀಗಂಧದಕಾವಲು ಹಾಗೂ ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂಬರ್‍ಗಳಲ್ಲಿ 300.03 ಎಕರೆ  ಜಮೀನನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ದಿ:01-07-1948 ರಲ್ಲಿ ಕಟ್ಟಡಗಳ ಶಂಕುಸ್ಥಾಪನೆ ಮಾಡಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭ ಮಾಡಲಾಗಿದೆ. ನಂತರ ಸರ್ಕಾರದ ಆದೇಶ ಸಂಖ್ಯೆ:ಆರ್‍ಡಿ 238/ಎಕ್ಯೂಬಿ76 ದಿ:06-12-1976 ರಲ್ಲಿ ಶ್ರೀಗಂಧಕಾವಲು ಗ್ರಾಮದ 8 ಎಕರೆ ಜಮೀನನ್ನು ನಿರಾಶ್ರಿತರ ಪರಿಹಾರ ಕೇಂದ್ರಕ್ಕಾಗಿ ಸರ್ಕಾರವು ಮಂಜೂರು ಮಾಡಿ ಆದೇಶ ಹೊರಡಿಸಿದ್ದು, ಒಟ್ಟು 308.03 ಎಕರೆ ಜಮೀನನ್ನು ನೀಡಲಾಗಿದೆ. ಈ ಪೈಕಿ 85.07 ಎಕರೆ ಜಮೀನನ್ನು ವಿವಿಧ ಇಲಾಖಾ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಗುತ್ತಿಗೆ ನೀಡಲಾದ 16.01 ಎಕರೆ ಜಮೀನು ಸೇರಿದಂತೆ, ಪ್ರಸ್ತುತ ಒಟ್ಟು 222.36 ಎಕರೆ ಜಮೀನು ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿದೆ. 

  

ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ಹಾಗೂ ನಿಯಮಗಳು 1975 ಹಾಗೂ ತತ್ಸಂಬಂಧ ತಿದ್ದುಪಡಿಗಳು

 

      ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ ಸೆಕ್ಷನ್ 3 ರನ್ವಯ ಕರ್ನಾಟಕ ರಾಜ್ಯದಲ್ಲಿ ಭಿಕ್ಷೆ ಬೇಡುವುದು ನಿಷೇಧಿಸಲಾಗಿದೆ. ಈ ಅಧಿನಿಯಮದ ಸೆಕ್ಷನ್ 11(1) ರ ಪ್ರಕಾರ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಸರ್ಕಾರದಿಂದ ಅಧಿಕಾರ ಹೊಂದಿದ ಅಧಿಕಾರಿಯು ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಬಂಧಿಸಲು ಅವಕಾಶವಿರುತ್ತದೆ. ಭಿಕ್ಷಾಟನೆ ಮಾಡುತ್ತಿರುವವರನ್ನು ಬಂಧಿಸಿ ಸೆಕ್ಷನ್ 11(3,4,5) ರ ಪ್ರಕಾರ ಕ್ರಮ ತೆಗೆದುಕೊಂಡು ತಾಲ್ಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸಿ ಅವರ ಆದೇಶದನ್ವಯ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಇರಿಸಲಾಗುವುದು. ಭಿಕ್ಷುಕರು/ನಿರಾಶ್ರಿತರ ಬಂಧನದ ಅವಧಿಯು ಕನಿಷ್ಟü 1 ವರ್ಷದಿಂದ ಗರಿಷ್ಟ 3 ವರ್ಷದವರೆಗೆ ಇರುತ್ತದೆ.

 

ಸಾರ್ವಜನಿಕರಲ್ಲಿ ಮನವಿ

 

    ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ ಸೆಕ್ಷನ್ 3 ರನ್ವಯ ಭಿಕ್ಷೆ ಬೇಡುವುದು ಸಾಮಾಜಿಕ ಅಪರಾಧ, ಭಿಕ್ಷೆ ನೀಡುವ ಮೂಲಕ ಭಿಕ್ಷಾಟನೆಗೆ ಪ್ರೋತ್ಸಾಹ ನೀಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು  ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ನೀಡಲಾಗಿದೆ.  ರಾಜ್ಯಾದ್ಯಂತ 160  ಜಿಲ್ಲಾ/ತಾಲ್ಲೂಕು ಕೇಂದ್ರಗಳ ಬಸ್‍ನಿಲ್ದಾಣಗಳಲ್ಲಿ ಶ್ರವ್ಯ ಮಾಧ್ಯಮಗಳ ಮೂಲಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 300 ಬಸ್‍ಗಳಲ್ಲಿ & ಬೆಂಗಳೂರು ನಗರ ಸಾರಿಗೆ ಸಂಸ್ಥೆಯ 150 ಬಸ್ಸುಗಳಲ್ಲಿ ಭಿಕ್ಷಾಟನೆ ನಿಷೇಧದ ಬಗ್ಗೆ ಜಾಹಿರಾತು ಫಲಕಗಳನ್ನು ಅಳವಡಿಸುವ ಮೂಲಕ ಹಾಗೂ ಬೆಂಗಳೂರು- ಮೈಸೂರು, ಬೆಂಗಳೂರು- ಶಿವಮೊಗ್ಗ, ಬೆಂಗಳೂರು-ಹುಬ್ಬಳ್ಳಿ ಇಂಟರ್‍ಸಿಟಿಯ ಎಂಟು ರೈಲುಗಳಲ್ಲಿ ಅಳವಡಿಸಲಾಗಿರುವ ಟಿ.ವಿ.ಗಳಲ್ಲಿ ಭಿಕ್ಷಾಟನಾ ನಿಷೇಧದ ಬಗ್ಗೆ ಜಾಹಿರಾತಿನ ಮೂಲಕ ಪ್ರಚುರಪಡಿಸಲಾಗಿದೆ. ಸಾರ್ವಜನಿಕರು ಭಿಕ್ಷುಕರ ಕುರಿತು ದೂರು ನೀಡಲು ಸಮಾಜ ಕಲ್ಯಾಣ ಇಲಾಖೆಯ ಕಲ್ಯಾಣ ಕೇಂದ್ರವು 24/7 ರಂತೆ ಕಾರ್ಯನಿರ್ವಹಿಸುತ್ತಿದ್ದು, ಇದರ ಮೂಲಕ ಭಿಕ್ಷುಕರ ಉಚಿತ ಸಹಾಯವಾಣಿ ಸಂಖ್ಯೆ: 10581 ಮತ್ತು ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರ ದೂರವಾಣಿ ಸಂಖ್ಯೆ 080-295561580 ಕ್ಕೆ ರಾಜ್ಯದ ಯಾವುದೇ ಭಾಗದಲ್ಲಿ ಭಿಕ್ಷುಕರು ಕಂಡುಬಂದಲ್ಲಿ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

 

ಭಿಕ್ಷುಕರ ಉಪಕರ ಸಂಗ್ರಹಣೆ.

 

  ಸರ್ಕಾರದ ಅಧಿಸೂಚನೆ ಸಂಖ್ಯೆ:ಎಸ್‍ಡಬ್ಲೂಡಿ:5ಎಸ್‍ಬಿಆರ್:76: ದಿನಾಂಕ:30-08-1976 ಹಾಗೂ ಅಧಿಸೂಚನೆ ಸಂಖ್ಯೆ:ಎಸ್‍ಡಬ್ಲೂಡಿ:15 ಎಸ್‍ಬಿಆರ್:1997 ದಿನಾಂಕ:28-08-1997 ರನ್ವಯ ಕ್ರಮವಾಗಿ ದಿನಾಂಕ: 01-04-1976 ಮತ್ತು 01.04.2000 ರಿಂದ ಜಾರಿಗೆ ಬರುವಂತೆ ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ ಸೆಕ್ಷನ್ 31 ರನ್ವಯ ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳಿಂದ ಭೂಮಿ ಮತ್ತು ಕಟ್ಟಡಗಳ ಮೇಲೆ ಶೇಕಡ 3 ರಷ್ಟು ಭಿಕ್ಷುಕರ ಕರವನ್ನು ಪಡೆದು 14 ನಿರಾಶ್ರಿತರ ಪರಿಹಾರ ಕೇಂದ್ರಗಳ ಸಿಬ್ಬಂದಿ ವೇತನ, ಕೇಂದ್ರಗಳ ನಿರ್ವಹಣೆ ಹಾಗೂ ಅಭಿವೃದ್ದಿ ಕಾರ್ಯಕ್ರಮಗಳಿಗೆ ವೆಚ್ಚವನ್ನು ಭರಿಸಲಾಗುತ್ತಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆ ಇರುವುದಿಲ್ಲ.

 

 ಪರಿಭಾಷೆಗಳು – ಕರ್ನಾಟಕ ಭಿಕ್ಷಾಟನಾ ಅಧಿನಿಯಮ 1975 ರ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು :-

 • “ಭಿಕ್ಷೆ” ಎಂದರೆ ಹಣ, ಬೇಯಿಸಿದ ಅಥವಾ ಬೇಯಿಸದ ಆಹಾರ ಧಾನ್ಯಗಳನ್ನು ಅಥವಾ ಬಟ್ಟೆಬರೆ ಮೊದಲಾದಂಥ ಅಥವಾ ಮೌಲ್ಯದ ಇತರ ಯಾವುದೇ ವಸ್ತುವನ್ನು ಭಿಕ್ಷುಕನಿಗೆ ಪುಕ್ಕಟೆಯಾಗಿ ಕೊಟ್ಟಿರುವ ವಸ್ತು:

 • “ಭಿಕ್ಷುಕ” ಎಂದರೆ ಮಗುವನ್ನು ಹೊರತುಪಡಿಸಿ,‘ಮಗು’ ಎಂದರೆ ಹದಿನಾರು ವರ್ಷಗಳ ವಯಸ್ಸು ತುಂಬಿರದ ಹುಡುಗ ಅಥವಾ ಹದಿನೆಂಟು ವರ್ಷಗಳ  ವಯಸ್ಸು ತುಂಬಿರದ ಹುಡುಗಿ;

“ಭಿಕ್ಷುಕ” ಎಂದರೆ”

 • ಹಾಡುವುದು, ಕುಣಿಯುವುದು, ಭವಿಷ್ಯ ಹೇಳುವುದು, ಕೈಚಳಕಗಳನ್ನು ಮಾಡಿ ತೋರಿಸುವುದು ಅಥವಾ ವಸ್ತುಗಳನ್ನು ಮಾರುವುದು ಇವುಗಳಂಥ ಯಾವುದೇ ಸೋಗಿನಿಂದಾಗಲಿ ಅಥವಾ ಅದಿಲ್ಲದೆ ಆಗಲಿ ಸಾರ್ವಜನಿಕ ಸ್ಥಳದಲ್ಲಿ ಭಿಕ್ಷೆ ಯಾಚಿಸುವ ಅಥವಾ ಸ್ವೀಕರಿಸುವ:

 • ಭಿಕ್ಷೆಯಾಚಿಸುವ ಅಥವಾ ಸ್ವೀಕರಿಸುವ ಉದ್ದೇಶಕ್ಕಾಗಿ ಯಾವುದೇ ಖಾಸಗಿ ಸ್ಥಳವನ್ನು ಪ್ರವೇಶಿಸುವ;

 • ಭಿಕ್ಷೆಯನ್ನು ಪಡೆಯುವ ಅಥವಾ ಬಲಾತ್ಕಾರದಿಂದ ಪಡೆಯುವ ಉದ್ದೇಶದಿಂದ ಮನುಷ್ಯನ ಅಥವಾ ಪ್ರಾಣಿಯ ಯಾವುದೇ ಹುಣ್ಣು, ಗಾಯ, ಕ್ಷತಿ, ಅಂಗವಿಕಾರ ಅಥವಾ ರೋಗವನ್ನು ಕಾಣುವ ಹಾಗೆ ತೋರಿಸುವ ಅಥವಾ ಪ್ರದರ್ಶಿಸುವ;

 • ಯಾವುದೇ ಗೋಚರ ಜೀವನ ನಿರ್ವಹಣೋಪಾಯವಿಲ್ಲದೆ, ಭಿಕ್ಷೆ ಯಾಚಿಸುವ ಅಥವಾ ಸ್ವೀಕರಿಸುವ ಮೂಲಕವೇ ತಾನು ಜೀವಿಸುತ್ತಿರುವೆನೆಂಬ ಸ್ಥಿತಿಯಲ್ಲಿ ಅಥವಾ ಅದು ಸಂಭವವಾಗುವಂಥ ರೀತಿಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಲೆದಾಡುವ ಅಥವಾ ಇರುವ;

 • ಭಿಕ್ಷೆ ಯಾಚಿಸುವ ಅಥವಾ ಸ್ವೀಕರಿಸುವ ಉದ್ದೇಶಕ್ಕಾಗಿ ಪ್ರದರ್ಶಿಕೆಯಂತೆ ಅವನನ್ನು ಉಪಯೋಗಿಸಿಕೊಳ್ಳಲು ಅವಕಾಶ ಕೊಡುವ ಯಾವನೇ ವ್ಯಕ್ತಿ; ಪರಂತು, ಒಬ್ಬ ವ್ಯಕ್ತಿಯನ್ನು ಅವನು, -

 • ನಿಯಮಿಸಿದ ರೀತಿಯಲ್ಲಿ ಭಿಕ್ಷೆ ಯಾಚಿಸಲು ಕೇಂದ್ರ ಪರಿಹಾರ ಸಮಿತಿಯು ಲೈಸೆನ್ಸ್ ಕೊಟ್ಟ ಧಾರ್ಮಿಕ  ಭಿಕ್ಷುವಾಗಿದ್ದರೆ;

 • ರೂಢಿ ಅಥವಾ ಧರ್ಮದ ಮೂಲಕ ಅನುಮೋದಿಸಲಾದ ಯಾವುದೇ ಧಾರ್ಮಿಕ ವ್ರತ ಅಥವಾ ಕರ್ತವ್ಯದ ನಿರ್ವಹಣೆಯಲ್ಲಿ ಉಪದ್ರವಕಾರಿಯಾಗದೆ ಖಾಸಗಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಭಿಕ್ಷೆಯನ್ನು ಸಂಗ್ರಹಿಸಿದರೆ; ಅಥವಾ

 • ಧಾರ್ಮಿಕವಾದಕ್ಕೆ ಆಗಿರಲಿ ಅಥವಾ ಜಾತ್ಯಾತೀತವಾದದ್ದೆ ಆಗಿರಲಿ ಯಾವುದೇ ಸಾರ್ವಜನಿಕ ಸಂಸ್ಥೆಗೆ ಅಥವಾ ಸಾರ್ವಜನಿಕರ ಒಳಿತಿಗಾಗಿ ಯಾವುದೇ ಉದ್ದೇಶವನ್ನು ವೃದ್ಧಿಗೊಳಿಸುವುದಕ್ಕಾಗಿ ನಗದಾಗಿ ಅಥವಾ ವಸ್ತು ರೂಪದಲ್ಲಿ ವಂತಿಗೆಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಲು ಕೇಂದ್ರ ಪರಿಹಾರ ಸಮಿತಿಯು ಬರಹದಲ್ಲಿ ಅನುಮತಿ ಪಡೆದಿದ್ದರೆ; ಅಥವಾ

 • ಅವನ ವ್ಯಾಸಂಗವನ್ನು ಮುಂದುವರಿಸುವುದಕ್ಕಾಗಿ ಭಿಕ್ಷೆಯನ್ನು ಸಂಗ್ರಹಿಸುವ ವಿದ್ಯಾರ್ಥಿಯಾಗಿದ್ದರೆ,

- ಭಿಕ್ಷುಕನೆಂದು ಭಾವಿಸತಕ್ಕುದಲ್ಲ.

 • ‘ಸಾರ್ವಜನಿಕ ಸ್ಥಳ’ ಎಂದರೆ ಸಾರ್ವಜನಿಕರ ಉಪಯೋಗಕ್ಕಾಗಿ ಉದ್ದೇಶಿಸಲಾದ ಅಥವಾ ಅವರಿಗೆ ಪ್ರವೇಶ ಅವಕಾಶವಿರುವ ಯಾವುದೇ ಸ್ಥಳ ಮತ್ತು ಇದು ಯಾವುದೇ ಸಾರ್ವಜನಿಕ ವಾಹನವನ್ನು ಒಳಗೊಳ್ಳುತ್ತದೆ.

 • ‘ಸ್ವೀಕರಣ ಕೇಂದ್ರ’ ಎಂದರೆ ಭಿಕ್ಷುಕರನ್ನು ಸ್ವೀಕರಣೆ ಮತ್ತು ತಾತ್ಕಾಲಿಕವಾಗಿ ಅವರನ್ನು ಇಟ್ಟುಕೊಳ್ಳುವುದಕ್ಕಾಗಿ ಕೇಂದ್ರ ಪರಿಹಾರ ಸಮಿತಿಯು ಸ್ಥಾಪಿಸಿದ ಕೇಂದ್ರ.

 

ಇತ್ತೀಚಿನ ನವೀಕರಣ​ : 19-06-2021 04:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೇಂದ್ರ ಪರಿಹಾರ ಸಮಿತಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080