ಅಭಿಪ್ರಾಯ / ಸಲಹೆಗಳು

ಬೆಂಗಳೂರು

ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರ

ಮಾಗಡಿ ಮುಖ್ಯ ರಸ್ತೆ, ನಿರಾಶ‍್ರಿತರ ಪರಿಹಾರ ಕೇಂದ್ರ ಅವರಣ,

ಬೆಂಗಳೂರು 560091

 ದೂರವಾಣಿ: 080-29551580 

ಸಹಾಯವಾಣಿ: 10581

 

ಶ್ರೀ ಶ್ರೀನಿವಾಸ, ಅಧೀಕ್ಷಕರು ಗ್ರೇಡ್‌ -1 (ಪ್ರಭಾರ)  ನಿರಾಶ್ರಿತರ ಪರಿಹಾರ ಕೇಂದ್ರ, ಬೆಂಗಳೂರು ರವರು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

 

 ನಿರಾ‍ಶ್ರಿತರ ಪರಿಹಾರ ಕೇಂದ್ರ, ಬೆಂಗಳೂರು ಇಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿವರ

ಕ್ರ.ಸಂ

ಹೆಸರು

ಪದನಾಮ

ಮೊಬೈಲ್ ಸಂಖ್ಯೆ

1 ಶ್ರೀನಿವಾಸ ಅಧೀಕ್ಷಕರು ಗ್ರೇಡ್ -1(ಪ್ರ) 8277802630
ಸ್ವೀವಿಕೃತಿ ವಿಭಾಗ
 1  ಆರ್.ತುಕಾರಾಂ  ಪ್ರ.ದ.ಸಹಾಯಕರು (ಪ್ರ)  9739518055
 2  ಟಿ.ಎಸ್.ವಿಜಯಕುಮಾರ್  ದ್ವಿ.ದ.ಸಹಾಯಕರು  9880325765
 3  ಡಿ.ಎಂ.ಜಯಮಾಲ ಹೆಡ್‌ ವಾರ್ಡರ್  9741553215
4 ಬಿ.ಎಸ್.ಮಹೇಶ್ ಹೆಡ್‌ ವಾರ್ಡರ್  8123372281
5 ಪಿ.ಮುತ್ತರಾಮಯ್ಯ ವಾರ್ಡರ್  8088141432
6 ರಂಗಪ್ಪ ಚಾಲಕರು 8277802631
7 ಅರ್.ಪ್ರಭುದೇವ್ ಸೈಕಲ್ ಆರ್ಡಲಿ  
ಪರಿಹಾರ ವಿಭಾಗ
1 ಶ್ರೀನಿವಾಸ್ ಪ್ರ.ದ.ಸಹಾಯಕರು 8277802630
2 ಎನ್ .ರತ್ನ ಬೆರಳಚ್ಚುಗಾರರು 9880045379
3 ಇ.ರಾಮು ಹೆಡ್‍ ವಾರ್ಡರ್ 8277802628
4 ವಿ.ಅರ್.ಹನುಮಂತರಾಯಪ್ಪ ವಾರ್ಡರ್  9945285372
5 ಕೆ.ರಘುನಾಥ್ ಚಾಲಕರು  8277802634
6 ಗಂಗಾಬಿಂಕೆ ಅಡುಗೆಯವರು  8722032298
7 ಎಸ್.ಕುಮಾರ್ ಜವಾನ  8277802625
8  ವಿಜಯಕುಮಾರ್ ಸ್ವೀಪರ್  8970966430

 

 ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳು

 ಉಪಹಾರ ಮತ್ತು ಊಟ

 

       ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ ನಿಯಮ 32 ರಂತೆ ಪ್ರತಿ ನಿತ್ಯ ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಪ್ರತಿಯೊಬ್ಬ ನಿರಾಶ್ರಿತರಿಗೆ  ಉಪ್ಪಿಟ್ಟು, ಪುಳಿಯೋಗರೆ, ಪಲಾವ್, ಪೊಂಗಲ್, ಟೊಮೋಟೋ ಬಾತ್, ವಾಂಗೀಬಾತ್, ಇಡ್ಲಿ  ಇತ್ಯಾದಿ.  ಬೆಳಗಿನ ಉಪಹಾರ ಮತ್ತು ಕಾಫಿ, ಮಧ್ಯಾಹ್ನ ತಲಾ 2 ಚಪಾತಿ, ಅನ್ನ-ಸಾಂಬಾರು, ಮಜ್ಜಿಗೆ ಹಾಗೂ ಸಾಯಂಕಾಲ ಅನ್ನ-ಸಾಂಬಾರು ಊಟವನ್ನು ನೀಡಲಾಗುತ್ತಿದ್ದು, ಪ್ರತಿ ಭಾನುವಾರ ಸಂಜೆ ಊಟದ ಜೊತೆಗೆ ಪಲ್ಯವನ್ನು ಅಕ್ಷಯಪಾತ್ರಾ ಫೌಂಡೇಶನ್ ಸಂಸ್ಥೆಯಿಂದ ತಲಾ ಒಬ್ಬ ನಿರಾಶ್ರಿತರಿಗೆ ದಿನ ಒಂದಕ್ಕೆ ರೂ.69/-ರಂತೆ ಪಾವತಿ ಮಾಡಿ ಸರಬರಾಜು ಪಡೆಯಲಾಗುತ್ತಿದೆ. ವಾರದಲ್ಲಿ ಮೂರು ದಿನ ಕೋಳಿಮೊಟ್ಟೆ ಮತ್ತು ಉಳಿದ ದಿನಗಳಲ್ಲಿ ಬಾಳೆಹಣ್ಣನ್ನು ನಿರಾಶ್ರಿತರ ಪರಿಹಾರ ಕೇಂದ್ರದಿಂದ ಒದಗಿಸಲಾಗುತ್ತದೆ.

          

   
 

ಕುಡಿಯುವ ನೀರಿನ ವ್ಯವಸ್ಥೆ

  ಬೆಂಗಳೂರು ಜಲಮಂಡಳಿಯಿಂದ ದಿನನಿತ್ಯದ 24 ಗಂಟೆಗಳ ಕಾಲ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಶುದ್ದ ಕುಡಿಯುವ ನೀರು ಒದಗಿಸಲು ನೀರಿನ ಶುದ್ಧೀಕರಣ ಘಟಕ ನಿರ್ಮಾಣವನ್ನು ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಮಾಡಲಾಗಿದೆ. ಉಳಿದ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ವಾಟರ್ ಫಿಲ್ಟರ್ ವ್ಯವಸ್ಥೆ ಕಲ್ಪಿಸಲಾಗಿದೆ

 

 ನಿರಾಶ್ರಿತರುಗಳಿಗೆ ಸ್ವಚ್ಚತೆಗಾಗಿ ಹಲ್ಲುಪುಡಿ/ಪೇಸ್ಟ್, ಮೈಸೋಪು/ಲಿಕ್ವಿಡ್ ಸೋಪ್, ಶಾಂಪು, ಬಟ್ಟೆ ಸೋಪು, ಕೊಬ್ಬರಿ ಎಣ್ಣೆ, ಬಾಚಣಿಗೆಗಳನ್ನು ಒದಗಿಸಲಾಗುತ್ತಿದೆ. ಬ್ಲೀಚಿಂಗ್‍ಪೌಡರ್, ಫೆನಾಯಿಲ್‍ಗಳಿಂದ ಪ್ರತಿನಿತ್ಯ ಡಾರ್ಮಿಟರಿಗಳನ್ನು ಸ್ವಚ್ಚಗೊಳಿಸಲಾಗುತ್ತಿದ್ದು, ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.  ಬೆಂಗಳೂರಿನ ಕೇಂದ್ರದಲ್ಲಿ ನಿರಾಶ್ರಿತರ ಬಟ್ಟೆಗಳನ್ನು ಒಗೆಯಲು ವಾಷಿಂಗ್ ಮೆಷಿನ್ ಅಳವಡಿಸಲಾಗಿದೆ.

 

ಸಮವಸ್ತ್ರ ಮತ್ತು ಹಾಸಿಗೆ-ಹೊದಿಕೆ.

    ಪುರುಷ ಹಾಗೂ ಮಹಿಳಾ ನಿರಾಶ್ರಿತರುಗಳಿಗೆ ವರ್ಷದಲ್ಲಿ ಈ ಕೆಳಕಂಡಂತೆ ಹಾಸಿಗೆ-ಹೊದಿಕೆ, ಮ್ಯಾಟ್‌ ಹಾಗೂ ಮೂರು ಜೊತೆ ಸಿದ್ದಪಡಿಸಿದ ಸಮವಸ್ತ್ರಗಳನ್ನು ನೀಡಲಾಗುತ್ತಿದೆ.       

ಸಮವಸ್ತ್ರ 

ಹಾಸಿಗೆ-ಹೊದಿಕೆ (ಒಂದು ಸೆಟ್)

ಪುರುಷರಿಗೆ    ಮಹಿಳೆಯರಿಗೆ
1 ಶರ್ಟ್‌  3 1 ಸೀರೆ   3 1 ಜಮಖಾನ   1
2 ನಿಕ್ಕರ್ 3 2 ರವಿಕೆ  3 2 ಬೆಡ್‍ಶೀಟ್  1
3 ಟವೆಲ್ 3 3 ಪೆಟ್ಟಿಕೋಟ್ 3 3 ಚಾಪೆ     1
4 ಸ್ವೆಟರ್  1 4 ಟವೆಲ್   3 4 ತಲೆದಿಂಬು  1
      5 ಸ್ವೆಟರ್ 1 5 ತಲೆದಿಂಬಿನ ಕವರ್ 1
       6 ಸ್ಯಾನಿಟರಿ ನ್ಯಾಪ್‍ಕಿನ್ಸ್      6  ಯೋಗ ಮ್ಯಾಟ್

    ನಿರಾಶ್ರಿತರುಗಳಿಗೆ ಸ್ವಚ್ಚತೆಗಾಗಿ ಹಲ್ಲುಪುಡಿ/ಪೇಸ್ಟ್, ಮೈಸೋಪು/ಲಿಕ್ವಿಡ್ ಸೋಪ್, ಶಾಂಪು, ಬಟ್ಟೆ ಸೋಪು, ಕೊಬ್ಬರಿ ಎಣ್ಣೆ, ಬಾಚಣಿಗೆಗಳನ್ನು ಒದಗಿಸಲಾಗುತ್ತಿದೆ.

        ಬ್ಲೀಚಿಂಗ್‍ಪೌಡರ್, ಫೆನಾಯಿಲ್‍ಗಳಿಂದ ಪ್ರತಿನಿತ್ಯ ಡಾರ್ಮಿಟರಿಗಳನ್ನು ಸ್ವಚ್ಚಗೊಳಿಸಲಾಗುತ್ತಿದ್ದು, ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.  ಬೆಂಗಳೂರಿನ ಕೇಂದ್ರದಲ್ಲಿ ನಿರಾಶ್ರಿತರ ಬಟ್ಟೆಗಳನ್ನು ಒಗೆಯಲು ವಾಷಿಂಗ್ ಮೆಷಿನ್ ಅಳವಡಿಸಲಾಗಿದೆ.

 

 

 ವೈದ್ಯಕೀಯ ಸೌಲಭ್ಯ

   ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಘಟಕದಲ್ಲಿ ಇಬ್ಬರು ವೈದ್ಯರು ಹಾಗೂ 06 ಶುಶ್ರೂಷಕರು ಕಾರ್ಯನಿರ್ವಹಿಸುತ್ತಿದ್ದು, ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಬಂಧಿಸಿ ತಂದ ನಿರಾಶ್ರಿತರಿಗೆ ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಿಸಲಾಗುವುದು ಹಾಗೂ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಕಳುಹಿಸಿಕೊಡಲಾಗುತ್ತದೆ. ಮಾನಸಿಕ ಆಸ್ವಸ್ಥರಿಗೆ ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರ ಮಾರ್ಗದರ್ಶನದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಸಲಹೆ ಮೇರೆಗೆ ವಿಶೇಷ ಔಷಧಿಗಳನ್ನು ಖರೀದಿಸಿ ನೀಡಲಾಗುತ್ತಿದೆ. ಉಳಿದ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಸಹ ವೈದ್ಯಕೀಯ ಚಿಕಿತ್ಸೆಗೆ ಆಧ್ಯತೆಯ ಮೇರೆಗೆ ಸರ್ಕಾರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮಾನಸಿಕ ಅಸ್ಪಸ್ಥ ನಿರಾಶ್ರಿತರ ಚಿಕಿತ್ಸೆ ಮತ್ತು ಮೇಲ್ವಚಾರಣೆಗಾಗಿ ತಲಾ 03 ನರ್ಸಿಂಗ್ ಸಿಬ್ಬಂದಿಗಳನ್ನು ಪಡೆದು ಚಿಕಿತ್ಸೆಗೆ ಮೊದಲ ಆದ್ಯತೆ ನೀಡಿ ದೈಹಿಕ /ಮಾನಸಿಕ ಆರೋಗ್ಯ ಸುಧಾರಣೆಗೆ ಕ್ರಮ ವಹಿಸಲಾಗುತ್ತಿದೆ.ನಿರಾಶ್ರಿತರ ಪರಿಹಾರ  ಕೇಂದ್ರಗಳ ರಕ್ಷಣೆಯಲ್ಲಿರುವ ಭಿಕ್ಷುಕರು/ನಿರಾಶ್ರಿತರು ವಿವಿಧ ಕಾಯಿಲೆ  ಹಾಗೂ ಹೆಚ್ಚಿನವರು ಮಾನಸಿಕ ಕಾಯಿಲೆಗಳಿಂದ ಬಳಲುವವರಾಗಿದ್ದು, ಇವರುಗಳಿಗೆ ನಿರಂತರ ಚಿಕಿತ್ಸೆ ಜೊತೆಗೆ ಕುಟುಂಬದ ರಕ್ಷಣೆ ಅಗತ್ಯವಾಗಿರುವುದರಿಂದ ಇವರುಗಳ  ಹಿನ್ನಲೆ ತಿಳಿಯಲು ಆಪ್ತ ಸಮಾಲೋಚಕರ ಸೇವೆಗಳನ್ನು ಪಡೆಯಲಾಗಿದ್ದು,  ಕುಟುಂಬಗಳನ್ನು ಸಂಪರ್ಕಿಸಿ ಅವರ ಮನೆಗಳಿಗೆ  ಮರಳಿಸಲು  ಕ್ರಮವಹಿಸಲಾಗುತ್ತಿದೆ.

  

 
       

 

 

ಮನರಂಜನೆ:

        ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ನಿರಾಶ್ರಿತರ ಮನರಂಜನೆಗಾಗಿ ಡಾರ್ಮಿಟರಿಗಳಲ್ಲಿ ಟಿ.ವಿ ಗಳನ್ನು ಅಳವಡಿಸಲಾಗಿದೆ. ಆಲ್ಲದೇ ವಿಶೇಷ ದಿನಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ನಾಟಕ, ಗಾಯನ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರದ ಆವರಣದಲ್ಲಿ ಸುಮಾರು 1200 ಆಸನ ಸಾಮಥ್ರ್ಯದ ಬಯಲು ರಂಗಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ವಿವಿಧ ಸಾಂಸ್ಕøತಿಕ ಚಟುವಟಿಕೆ  ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಹಾಗೂ  ನಿರಾಶ್ರಿತರಿಂದಲೇ ಹಾಡು, ನೃತ್ಯ, ನಾಟಕ, ಯೋಗಾಸನ ಇತ್ಯಾದಿ ಗಳನ್ನು ನಡೆಸಲಾಗುತ್ತದೆ ಮತ್ತು ಪ್ರೊಜೆಕ್ಟರ್ ಮೂಲಕ ಟಿ.ವಿ. ಕಾರ್ಯಕ್ರಮಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.  ಉಳಿದ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿಯೂ ಸಹ ಬೆಳಗಿನ ವಾಕಿಂಗ್ ಯೋಗ/ಧ್ಯಾನಗಳಲ್ಲಿ ನಿರತಗೊಳಿಸಲಾಗುತ್ತಿದೆ.

 

 

 

ತರಭೇತಿ ಕಾರ್ಯಕ್ರಮಗಳು

        ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿರುವ ನಿರಾಶ್ರಿತರು ಕೇಂದ್ರಗಳಿಂದ ಬಿಡುಗಡೆಯಾದ ನಂತರ ಪುನಃ ಭಿಕ್ಷಾಟನಾ ವೃತ್ತಿಗೆ ಮರಳಬಾರದೆಂಬ ಉದ್ದೇಶದಿಂದ ಮತ್ತು ತಮ್ಮ ಜೀವನಕ್ಕೆ ತಾವೇ ಯಾವುದಾದರೊಂದು ಉದ್ದಿಮೆಯಲ್ಲಿ ತರಭೇತಿ ಹೊಂದಿದಲ್ಲಿ, ತರಭೇತಿ ಅನುಭವದಿಂದ ತಮ್ಮ ಜೀವನ ನಿರ್ವಹಣೆ ಮಾಡುವುದಕ್ಕಾಗಿ ಬೆಂಗಳೂರು ನಿರಾಶ್ರಿತರ  ಪರಿಹಾರ  ಕೇಂದ್ರದಲ್ಲಿ  ಹೊಲಿಗೆ ತರಭೇತಿ, ಕೃಷಿ ಹಾಗೂ ತೋಟಗಾರಿಕೆ, ತೆಂಗಿನನಾರಿನ ಮ್ಯಾಟ್ ತಯಾರಿಕೆ, ಫೆನಾಯಿಲ್,ಸೋಪ್ ವಾಟರ್, ಬ್ಲಿಚಿಂಗ್ ಪೌಡರ್, ಇತ್ಯಾದಿ ಗೃಹೋಪಯೋಗಿ ವಸ್ತುಗಳ ತಯಾರಿಕೆ, ಬಾತುಕೋಳಿ/ಕುರಿ/ಹಸುಗಳ ಸಾಕಾಣಿಕೆ, ಪೇಪರ್ ಕವರ್,ಫೈಲ್ ರ್ಯಾಪರ್ ತಯಾರಿಕೆಗಳಲ್ಲಿ ತರಭೇತಿ ನೀಡಲಾಗುತ್ತಿದ್ದು, ತರಭೇತಿ ಅವಧಿಯಲ್ಲಿ ಪ್ರತಿ ನಿರಾಶ್ರಿತರಿಗೆ ಪ್ರತಿ ದಿನದ 8 ಗಂಟೆಗಳ ಅವಧಿಗೆ ತರಬೇತಿ ನಿರತ ನಿರಾಶ್ರಿತರಿಗೆ ರೂ.75/-ರಂತೆ ಹಾಗೂ 08 ಗಂಟೆಗಳಿಗಿಂತ ಕಡಿಮೆ ಅವಧಿ ತರಬೇತಿಗೆ ರೂ.38/- ರಂತೆ ತರಬೇತಿಭತ್ಯೆ/ದಿನಗೂಲಿ ನೀಡಲಾಗುತ್ತಿದೆ. ಉಳಿದ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿಯೂ ಕೃಷಿ/ತೋಟಗಾರಿಕೆ, ಫೈಲ್ ರಾಪರ್, ಫಿನಾಯಲ್ ತಯಾರಿಕೆ, ಪಶುಸಂಗೋಪನೆ ಇತ್ಯಾದಿ ತರಭೇತಿ ನೀಡಲಾಗುತ್ತಿದೆ.  ಅಕ್ಷರಸ್ಥ ನಿರಾಶ್ರಿತರಿಗಾಗಿ ಗ್ರಂಥಾಲಯ ಸೌಲಭ್ಯವಿದೆ ಮತ್ತು ಅನಕ್ಷರಸ್ಥರಿಗಾಗಿ ಸಾಕ್ಷರತಾ ಕಾರ್ಯಕ್ರಮಗಳನ್ನು ಇಬ್ಬರು ಬೋಧಕ ಸಿಬ್ಬಂದಿಯ ನೆರವಿನೊಂದಿಗೆ ನಡೆಸಲಾಗುತ್ತಿದೆ. 

 

 
   
   

 

   ಕೃಷಿ ಮತ್ತು ಪಶುಸಂಗೋಪನೆ

 

 

ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬಗ್ಗೆ

      ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ ಸೆಕ್ಷನ್ 3 ರನ್ವಯ ಭಿಕ್ಷೆ ಬೇಡುವುದು ಸಾಮಾಜಿಕ ಅಪರಾಧ, ಭಿಕ್ಷೆ ನೀಡುವ ಮೂಲಕ ಭಿಕ್ಷಾಟನೆಗೆ ಪ್ರೋತ್ಸಾಹ ನೀಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು  ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ನೀಡಲಾಗಿದೆ.  ರಾಜ್ಯಾದ್ಯಂತ 160  ಜಿಲ್ಲಾ/ತಾಲ್ಲೂಕು ಕೇಂದ್ರಗಳ ಬಸ್‍ನಿಲ್ದಾಣಗಳಲ್ಲಿ ಶ್ರವ್ಯ ಮಾಧ್ಯಮಗಳ ಮೂಲಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 300 ಬಸ್‍ಗಳಲ್ಲಿ & ಬೆಂಗಳೂರು ನಗರ ಸಾರಿಗೆ ಸಂಸ್ಥೆಯ 150 ಬಸ್ಸುಗಳಲ್ಲಿ ಭಿಕ್ಷಾಟನೆ ನಿಷೇಧದ ಬಗ್ಗೆ ಜಾಹಿರಾತು ಫಲಕಗಳನ್ನು ಅಳವಡಿಸುವ ಮೂಲಕ  ಹಾಗೂ ಬೆಂಗಳೂರು- ಮೈಸೂರು, ಬೆಂಗಳೂರು- ಶಿವಮೊಗ್ಗ, ಬೆಂಗಳೂರು-ಹುಬ್ಬಳ್ಳಿ ಇಂಟರ್ ಸಿಟಿಯ ಎಂಟು ರೈಲುಗಳಲ್ಲಿ ಅಳವಡಿಸಲಾಗಿರುವ ಟಿ.ವಿ.ಗಳಲ್ಲಿ ಭಿಕ್ಷಾಟನಾ ನಿಷೇಧದ ಬಗ್ಗೆ ಜಾಹಿರಾತಿನ ಮೂಲಕ ಪ್ರಚುರಪಡಿಸಲಾಗಿದೆ.   ಸಾರ್ವಜನಿಕರು ಭಿಕ್ಷುಕರ ಕುರಿತು ದೂರು ನೀಡಲು  ಸಮಾಜ ಕಲ್ಯಾಣ ಇಲಾಖೆಯ ಕಲ್ಯಾಣ ಕೇಂದ್ರವು 24/7 ರಂತೆ ಕಾರ್ಯನಿರ್ವಹಿಸುತ್ತಿದ್ದು,  ಇದರ ಮೂಲಕ ಭಿಕ್ಷುಕರ ಉಚಿತ ಸಹಾಯವಾಣಿ ಸಂಖ್ಯೆ: 10581 ಮತ್ತು  080-22634300 ಹಾಗೂ ರಾಜ್ಯದ ಯಾವುದೇ ಭಾಗದಲ್ಲಿ ಭಿಕ್ಷುಕರು ಕಂಡುಬಂದಲ್ಲಿ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

 

 

 

ಬೆಂಗಳೂರು ನಿರಾಶ‍್ರಿತರ ಪರಿಹಾರ ಕೇಂದ್ರದಲ್ಲಿ ಹಾಲಿ ಇರುವ ನಿರಾಶ‍್ರಿತರ ವಿವರಗಳು

01-04-2021 ರ ಆರಂಭಿಕ ಶಿಲ್ಕು

01-04-2021 ರಿಂದ  30-09-2021 ರವರೆಗೆ ಬಂಧಿಸಲಾದ ನಿರಾಶ್ರಿತರ ಸಂಖ್ಯೆ

01-04-2021 ರಿಂದ 30-09-2021 ರವರೆಗೆ ಒಟ್ಟು ನಿರಾಶ್ರಿತರ ಸಂಖ್ಯೆ

01-04-2021 ರಿಂದ 30-09-2021 ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

01-04-2021 ರಿಂದ 30-09-2021 ರವರ ಅಂತ್ಯಕ್ಕೆ ಇದ್ದ ನಿರಾಶ್ರಿತರ ಸಂಖ್ಯೆ

ಪು

ಪು

ಪು

ಪು

ಪು

 497

150 

647 

212

60

272

709

210

919

229

57

280

480

153

633

 

 

ಇತ್ತೀಚಿನ ನವೀಕರಣ​ : 04-10-2021 05:19 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೇಂದ್ರ ಪರಿಹಾರ ಸಮಿತಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080