ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಮೂಲೋದ್ದೇಶಗಳು

ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 

 

ರಾಜ್ಯದಲ್ಲಿ ಭಿಕ್ಷಾಟನೆಯನ್ನು ತಡೆಗಟ್ಟುವ ಉದ್ದೇಶದಿಂದ ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ರವರು ಸರ್ಕಾರದ ಆದೇಶ ಸಂಖ್ಯೆ:ಪಿ:4339 ದಿ.9-12-1944 ರಲ್ಲಿ ಬೆಂಗಳೂರು, ಮಾಗಡಿ ಮುಖ್ಯ ರಸ್ತೆಯ ಶ್ರೀಗಂಧದಕಾವಲು ಹಾಗೂ ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂಬರ್‍ಗಳಲ್ಲಿ 300.03 ಎಕರೆ  ಜಮೀನನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ದಿ:01-07-1948 ರಲ್ಲಿ ಕಟ್ಟಡಗಳ ಶಂಕುಸ್ಥಾಪನೆ ಮಾಡಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭ ಮಾಡಲಾಗಿದೆ. ನಂತರ ಸರ್ಕಾರದ ಆದೇಶ ಸಂಖ್ಯೆ:ಆರ್‍ಡಿ 238/ಎಕ್ಯೂಬಿ76 ದಿ:06-12-1976 ರಲ್ಲಿ ಶ್ರೀಗಂಧಕಾವಲು ಗ್ರಾಮದ 8 ಎಕರೆ ಜಮೀನನ್ನು ನಿರಾಶ್ರಿತರ ಪರಿಹಾರ ಕೇಂದ್ರಕ್ಕಾಗಿ ಸರ್ಕಾರವು ಮಂಜೂರು ಮಾಡಿ ಆದೇಶ ಹೊರಡಿಸಿದ್ದು, ಒಟ್ಟು 308.03 ಎಕರೆ ಜಮೀನನ್ನು ನೀಡಲಾಗಿದೆ. ಈ ಪೈಕಿ 85.07 ಎಕರೆ ಜಮೀನನ್ನು ವಿವಿಧ ಇಲಾಖಾ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಗುತ್ತಿಗೆ ನೀಡಲಾದ 16.01 ಎಕರೆ ಜಮೀನು ಸೇರಿದಂತೆ, ಪ್ರಸ್ತುತ ಒಟ್ಟು 222.36 ಎಕರೆ ಜಮೀನು ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿದೆ. 

  

ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ಹಾಗೂ ನಿಯಮಗಳು 1975 ಹಾಗೂ ತತ್ಸಂಬಂಧ ತಿದ್ದುಪಡಿಗಳು

 

      ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ ಸೆಕ್ಷನ್ 3 ರನ್ವಯ ಕರ್ನಾಟಕ ರಾಜ್ಯದಲ್ಲಿ ಭಿಕ್ಷೆ ಬೇಡುವುದು ನಿಷೇಧಿಸಲಾಗಿದೆ. ಈ ಅಧಿನಿಯಮದ ಸೆಕ್ಷನ್ 11(1) ರ ಪ್ರಕಾರ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಸರ್ಕಾರದಿಂದ ಅಧಿಕಾರ ಹೊಂದಿದ ಅಧಿಕಾರಿಯು ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಬಂಧಿಸಲು ಅವಕಾಶವಿರುತ್ತದೆ. ಭಿಕ್ಷಾಟನೆ ಮಾಡುತ್ತಿರುವವರನ್ನು ಬಂಧಿಸಿ ಸೆಕ್ಷನ್ 11(3,4,5) ರ ಪ್ರಕಾರ ಕ್ರಮ ತೆಗೆದುಕೊಂಡು ತಾಲ್ಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸಿ ಅವರ ಆದೇಶದನ್ವಯ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಇರಿಸಲಾಗುವುದು. ಭಿಕ್ಷುಕರು/ನಿರಾಶ್ರಿತರ ಬಂಧನದ ಅವಧಿಯು ಕನಿಷ್ಟü 1 ವರ್ಷದಿಂದ ಗರಿಷ್ಟ 3 ವರ್ಷದವರೆಗೆ ಇರುತ್ತದೆ.

 ಸಾರ್ವಜನಿಕರಲ್ಲಿ ಮನವಿ

 

    ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ ಸೆಕ್ಷನ್ 3 ರನ್ವಯ ಭಿಕ್ಷೆ ಬೇಡುವುದು ಸಾಮಾಜಿಕ ಅಪರಾಧ, ಭಿಕ್ಷೆ ನೀಡುವ ಮೂಲಕ ಭಿಕ್ಷಾಟನೆಗೆ ಪ್ರೋತ್ಸಾಹ ನೀಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು  ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ನೀಡಲಾಗಿದೆ.  ರಾಜ್ಯಾದ್ಯಂತ 160  ಜಿಲ್ಲಾ/ತಾಲ್ಲೂಕು ಕೇಂದ್ರಗಳ ಬಸ್‍ನಿಲ್ದಾಣಗಳಲ್ಲಿ ಶ್ರವ್ಯ ಮಾಧ್ಯಮಗಳ ಮೂಲಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 300 ಬಸ್‍ಗಳಲ್ಲಿ & ಬೆಂಗಳೂರು ನಗರ ಸಾರಿಗೆ ಸಂಸ್ಥೆಯ 150 ಬಸ್ಸುಗಳಲ್ಲಿ ಭಿಕ್ಷಾಟನೆ ನಿಷೇಧದ ಬಗ್ಗೆ ಜಾಹಿರಾತು ಫಲಕಗಳನ್ನು ಅಳವಡಿಸುವ ಮೂಲಕ ಹಾಗೂ ಬೆಂಗಳೂರು- ಮೈಸೂರು, ಬೆಂಗಳೂರು- ಶಿವಮೊಗ್ಗ, ಬೆಂಗಳೂರು-ಹುಬ್ಬಳ್ಳಿ ಇಂಟರ್‍ಸಿಟಿಯ ಎಂಟು ರೈಲುಗಳಲ್ಲಿ ಅಳವಡಿಸಲಾಗಿರುವ ಟಿ.ವಿ.ಗಳಲ್ಲಿ ಭಿಕ್ಷಾಟನಾ ನಿಷೇಧದ ಬಗ್ಗೆ ಜಾಹಿರಾತಿನ ಮೂಲಕ ಪ್ರಚುರಪಡಿಸಲಾಗಿದೆ. ಸಾರ್ವಜನಿಕರು ಭಿಕ್ಷುಕರ ಕುರಿತು ದೂರು ನೀಡಲು ಸಮಾಜ ಕಲ್ಯಾಣ ಇಲಾಖೆಯ ಕಲ್ಯಾಣ ಕೇಂದ್ರವು 24/7 ರಂತೆ ಕಾರ್ಯನಿರ್ವಹಿಸುತ್ತಿದ್ದು, ಇದರ ಮೂಲಕ ಭಿಕ್ಷುಕರ ಉಚಿತ ಸಹಾಯವಾಣಿ ಸಂಖ್ಯೆ: 10581 ಮತ್ತು ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರ ದೂರವಾಣಿ ಸಂಖ್ಯೆ 080-295561580 ಕ್ಕೆ ರಾಜ್ಯದ ಯಾವುದೇ ಭಾಗದಲ್ಲಿ ಭಿಕ್ಷುಕರು ಕಂಡುಬಂದಲ್ಲಿ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

 ಭಿಕ್ಷುಕರ ಉಪಕರ ಸಂಗ್ರಹಣೆ.

 

  ಸರ್ಕಾರದ ಅಧಿಸೂಚನೆ ಸಂಖ್ಯೆ:ಎಸ್‍ಡಬ್ಲೂಡಿ:5ಎಸ್‍ಬಿಆರ್:76: ದಿನಾಂಕ:30-08-1976 ಹಾಗೂ ಅಧಿಸೂಚನೆ ಸಂಖ್ಯೆ:ಎಸ್‍ಡಬ್ಲೂಡಿ:15 ಎಸ್‍ಬಿಆರ್:1997 ದಿನಾಂಕ:28-08-1997 ರನ್ವಯ ಕ್ರಮವಾಗಿ ದಿನಾಂಕ: 01-04-1976 ಮತ್ತು 01.04.2000 ರಿಂದ ಜಾರಿಗೆ ಬರುವಂತೆ ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ ಸೆಕ್ಷನ್ 31 ರನ್ವಯ ರಾಜ್ಯದಲ್ಲಿನ ಸ್ಥಳೀಯ ಸಂಸ್ಥೆಗಳಿಂದ ಭೂಮಿ ಮತ್ತು ಕಟ್ಟಡಗಳ ಮೇಲೆ ಶೇಕಡ 3 ರಷ್ಟು ಭಿಕ್ಷುಕರ ಕರವನ್ನು ಪಡೆದು 14 ನಿರಾಶ್ರಿತರ ಪರಿಹಾರ ಕೇಂದ್ರಗಳ ಸಿಬ್ಬಂದಿ ವೇತನ, ಕೇಂದ್ರಗಳ ನಿರ್ವಹಣೆ ಹಾಗೂ ಅಭಿವೃದ್ದಿ ಕಾರ್ಯಕ್ರಮಗಳಿಗೆ ವೆಚ್ಚವನ್ನು ಭರಿಸಲಾಗುತ್ತಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆ ಇರುವುದಿಲ್ಲ.

 

 ಪರಿಭಾಷೆಗಳು – ಕರ್ನಾಟಕ ಭಿಕ್ಷಾಟನಾ ಅಧಿನಿಯಮ 1975 ರ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು :-

“ಭಿಕ್ಷುಕ” ಎಂದರೆ”

- ಭಿಕ್ಷುಕನೆಂದು ಭಾವಿಸತಕ್ಕುದಲ್ಲ.