ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಆಡಳಿತ

ಕರ್ನಾಟಕ ಸರ್ಕಾರ
ಸಮಾಜ ಕಲ್ಯಾಣ ಇಲಾಖೆ
ಕೇಂದ್ರ ಪರಿಹಾರ ಸಮಿತಿ

ಕಛೇರಿಯ ವಿಳಾಸ:
ಕಾರ್ಯದರ್ಶಿಗಳ ಕಛೇರಿ, ಕೇಂದ್ರ ಪರಿಹಾರ ಸಮಿತಿ, ನಿರಾಶ್ರಿತರ ಪರಿಹಾರ ಕೇಂದ್ರದ ಆವರಣ, ಮಾಗಡಿ ಮುಖ್ಯರಸ್ತೆ,
ಬೆಂಗಳೂರು-560091 , ದೂರವಾಣಿ: 080-29556626, 29554646,


E-Mail: sec-crcbng@ka.gov.in                  crcbng@yahoo.co.in           Website: www.crcbng.karnataka.gov.in

           

 

  ಡಾ.ಹೆಚ್.ಸಿ.ಮಹದೇವಪ್ಪ

ಸನ್ಮಾನ್ಯ ಸಮಾಜ ಕಲ್ಯಾಣ ಹಾಗೂ

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು

 

ರಣದೀಪ್ ಡಿ ಐಎಎಸ್ 

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,

ಸಮಾಜ ಕಲ್ಯಾಣ ಇಲಾಖೆ

 aga sultan.jpg

ಅಗಾ ಸುಲ್ತಾನ್ ಮುರ್ತುಜಾ 

ಮಾನ್ಯ ಅಧ್ಯಕ್ಷರು,

ಕೇಂದ್ರ ಪರಿಹಾರ ಸಮಿತಿ,

ಬೆಂಗಳೂರು

 

 

 ಸಮಿತಿ ಸದಸ್ಯರು

 

ವಿಜಯ‌ ಕುಮಾರ್ ಎ.ಬಿ.

ಕಾರ್ಯದರ್ಶಿ

ಕೇಂದ್ರ ಪರಿಹಾರ ಸಮಿತಿ,

ಬೆಂಗಳೂರು

 

       

        ಕೇಂದ್ರ ಪರಿಹಾರ ಸಮಿತಿಯು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಆಡಳಿತಕ್ಕೆ ಒಳಪಟ್ಟಿರುತ್ತದೆ.  ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ ಸೆಕ್ಷನ್ 4 (2) ರನ್ವಯ  ಸಮಿತಿಯು ಕೆಳಕಂಡ ಅಧಿಕಾರಿ/ಸದಸ್ಯರನ್ನು ಒಳಗೊಂಡಿರುತ್ತದೆ. ಸಮಿತಿಯು ರಾಜ್ಯದಲ್ಲಿರುವ ಎಲ್ಲಾ ನಿರಾಶ್ರಿತರ ಪರಿಹಾರ ಕೇಂದ್ರಗಳ ಆಡಳಿತ ನಿರ್ವಹಣೆ ಮತ್ತು ಮೇಲುಸ್ತುವಾರಿಯ ಜವಾಬ್ದಾರಿಯನ್ನು ಹೊಂದಿರುತ್ತದೆ.   

   

 

1

ಸರ್ಕಾರದ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ  

ಸದಸ್ಯರು

2

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ 

ಸದಸ್ಯರು

3

ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ

ಸದಸ್ಯರು

4

ಸರ್ಕಾರದಿಂದ ನಾಮನಿರ್ದೇಶಿತರಾದ ಸರ್ಕಾರೇತರ ಸದಸ್ಯರು

04 ಸದಸ್ಯರು

      ಮೇಲ್ಕಾಣಿಸಿದ ಸಮಿತಿಯ ಸದಸ್ಯರ ಪೈಕಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸುತ್ತದೆ. 

 

  ಸರ್ಕಾರದ ಅಧಿಸೂಚನೆ ಸಂಖ್ಯೆ: ಸಕಇ:149:ಪಕಸೇ:2025 ದಿನಾಂಕ: 17-04-2025 ರನ್ವಯ ಶ್ರೀ ಚಂದ್ರಪ್ಪ.ಭೀ.ಗೋಕಾಕ, (ಪ್ರಭಾರ), ಹಾಲಿ ಸಹಾಯಕ ಕಾರ್ಯದರ್ಶಿ, ಬೆಂಗಳೂರು ರವರನ್ನು ಕೇಂದ್ರ ಪರಿಹಾರ ಸಮಿತಿ ಕಾರ್ಯದರ್ಶಿ ಪ್ರಭಾರ ಹುದ್ದೆಗೆ ನೇಮಕ ಮಾಡಲಾಗಿದ್ದು, ದಿನಾಂಕ 19-04-2025 ರಂದು ಅಪರಾಹ್ನ ಕಾರ್ಯಭಾರ ವಹಿಸಿಕೊಂಡಿರುತ್ತಾರೆ.

 

  ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ಪರಿಹಾರ ಸಮಿತಿಗಳು

 

        ಕೇಂದ್ರ ಪರಿಹಾರ ಸಮಿತಿಯ ಆಡಳಿತ ವ್ಯಾಪ್ತಿಯಲ್ಲಿ ಜಿಲ್ಲಾ ಮಟ್ಟದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರಗಳ ಆಡಳಿತ ವ್ಯವಸ್ಥೆಗೆ ಅಧಿನಿಯಮದ ಕಲಂ 5 ರನ್ವಯ ಸ್ಥಳೀಯ ಪರಿಹಾರ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ ಹಾಗೂ ಜಂಟಿ/ಉಪನಿರ್ದೇಶಕರು, ಜಿಲ್ಲಾ ಸಮಾಜ ಕಲ್ಯಾಣ, ಸ್ಥಳೀಯ ಪರಿಹಾರ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಸ್ಥಳೀಯ ಸಮಿತಿಯಲ್ಲಿ ಪೂರಕವಾದ ಸಂಪರ್ಕ ಅಗತ್ಯವಿರುವ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡಂತೆ ಕನಿಷ್ಠ 08 ಮತ್ತು ಗರಿಷ್ಠ 12 ಸದಸ್ಯರನ್ನು ಕೇಂದ್ರ ಪರಿಹಾರ ಸಮಿತಿಯಿಂದ ನೇಮಕ ಮಾಡಲಾಗುತ್ತದೆ. ಸ್ಥಳೀಯ ಪರಿಹಾರ ಸಮಿತಿಯ ಸದಸ್ಯರ ವಿವರ ಈ ಕೆಳಕಂಡಂತಿದೆ.

 

ಕ್ರ.ಸಂ

                ವಿವರ   

ಅಧ್ಯಕ್ಷರು/ಸದಸ್ಯರು

1 ಜಿಲ್ಲಾಧಿಕಾರಿಗಳು.
ಅಧ್ಯಕ್ಷರು
2 ಆಯುಕ್ತರು, ನಗರಸಭೆ ಅಥವಾ ಅವರಿಂದ ನಾಮನಿರ್ದೇಶಿತರು ಸದಸ್ಯರು
3 ಆರಕ್ಷಕ ಆಯುಕ್ತರು ಅಥವಾ ಅವರಿಂದ ನಾಮನಿರ್ದೇಶಿತರು ಸದಸ್ಯರು
4 ಜಿಲ್ಲಾ ಆರೋಗ್ಯಾಧಿಕಾರಿಗಳು ಅಥವಾ ಅವರಿಂದ ನಾಮನಿರ್ದೇಶಿತರು ಸದಸ್ಯರು
5 ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಅಥವಾ ಅವರಿಂದ ನಾಮನಿರ್ದೇಶಿತರು ಸದಸ್ಯರು
6 ಜಂಟಿ ನಿರ್ದೇಶಕರು, ಕೈಗಾರಿಕೆ & ವಾಣಿಜ್ಯ ಇಲಾಖೆ ಅಥವಾ ಅವರಿಂದ ನಾಮನಿರ್ದೇಶಿತರು ಸದಸ್ಯರು
7 ಉಪ ನಿರ್ದೇಶಕರು, ತೋಟಗಾರಿಕೆ ಅಥವಾ ಅವರಿಂದ ನಾಮನಿರ್ದೇಶಿತರು ಸದಸ್ಯರು
8

ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಥವಾ ಅವರಿಂದ ನಾಮನಿರ್ದೇಶಿತರು      

ಸದಸ್ಯರು
9

ಸರ್ಕಾರಿ ವಕೀಲರು, ಸಂಬಂದಪಟ್ಟ ಜಿಲ್ಲೆ (ಜಿಲ್ಲಾಧಿಕಾರಿಗಳಿಂದ ನಾಮನಿರ್ದೇಶಿತರು)

ಸದಸ್ಯರು
10 ತಾಲ್ಲೂಕು ದಂಡಾಧಿಕಾರಿಗಳು, ಸಂಬಂಧಪಟ್ಟ ಜಿಲ್ಲೆ ಕೇಂದ್ರಸ್ಥಾನ ಸದಸ್ಯರು
11 ಜಂಟಿ ನಿರ್ದೇಶಕರು/ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಸದಸ್ಯರು/ ಸದಸ್ಯ ಕಾರ್ಯದರ್ಶಿ

 

 ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರವು ಮಾನ್ಯ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ರವರ ನಿಯಂತ್ರಣದಲ್ಲಿರುತ್ತದೆ. ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಗ್ರೂಪ್-ಎ ಶ್ರೇಣಿಯ ಅಧೀಕ್ಷಕರು ಮತ್ತು ಉಳಿದ 13 ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಗ್ರೂಪ್-ಬಿ ಹುದ್ದೆಯ ಪತ್ರಾಂಕಿತ ಅಧಿಕಾರಿಗಳು ಅಧೀಕ್ಷಕರಾಗಿ ಸಂಸ್ಥೆಯ ಎಲ್ಲಾ ಚಟುವಟಿಕೆಗಳ ಮೇಲ್ವಿಚಾರಕರಾಗಿ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಾರೆ.

 

ಕೇಂದ್ರ ಪರಿಹಾರ ಸಮಿತಿ, ಬೆಂಗಳೂರು ಆಡಳಿತ ಕಛೇರಿಗೆ ಮಂಜೂರಾದ, ಭರ್ತಿಯಾದ ಹಾಗೂ ಖಾಲಿ ಇರುವ ಹುದ್ದೆಗಳು

 

ಕ್ರ.ಸಂ ಪದನಾಮ ಮಂಜೂ ರಾದ ಹುದ್ದೆಗಳು ಭರ್ತಿಯಾದ ಹುದ್ದೆಗಳು ಖಾಲಿ ಇರುವ ಹುದ್ದೆಗಳು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು
1 ಕಾರ್ಯದರ್ಶಿ 1 1 0 ವಿಜಯ‌ ಕುಮಾರ್ ಎ.ಬಿ.
2 ಸಹಾಯಕ ಕಾರ್ಯದರ್ಶಿ 1 1 0 ಶ್ರೀ ಚಂದ್ರಪ್ಪ ಭಿ.ಗೋಕಾಕ್
3 ಸಮನ್ವಯಾಧಿಕಾರಿ 1 1 0 ಶ್ರೀ ಎಂ.ಮಲ್ಲಿಕಾರ್ಜುನ್ (ನಿಯೋಜನೆ)
ಲೆಕ್ಕಾಧೀಕ್ಷಕರು 1 1 0 ಶ್ರೀ ರವಿಕುಮಾರ್ (ನಿಯೋಜನೆ)
5 ಕಛೇರಿ ಅಧೀಕ್ಷಕರು 1 1 0 ಶ್ರೀ ಶ್ರೀನಿವಾಸ್
6 ಪ್ರ.ದ.ಸಹಾಯಕರು 4

2

2

ಶ್ರೀ ಎಂ.ಮಂಜುನಾಥ್‌ (ಸ್ವ.ಪ್ರ) (ನಿಯೋಜನೆ ಕೋಲಾರ ನಿಪಕೇ)

ಶ್ರೀ.ಕೆ.ಶಾಂತಕುಮಾರ್(ಸ್ವ.ಪ್ರ)

7 ಶೀಘ್ರಲಿಪಿಗಾರರು 2 0 2

ಖಾಲಿ

8 ದ್ವಿ.ದ.ಸಹಾಯಕರು 4 1 3

ಶ್ರೀ ಆನಂದ್

ಶ್ರೀ ಕೆ.ರಘುನಾಥ್ (ನಿಯೋಜನೆ, ಬೆಂಗಳೂರು ನಿಪಕೇಂದ್ರ)

9 ಬೆರಳಚ್ಚುಗಾರರು 2 0 2 ಖಾಲಿ
10 ವಾಹನ ಚಾಲಕರು 1 0 1 ಖಾಲಿ
 11 ಸೈಕಲ್‌ ಅರ್ಡಲಿ 1 0 1 ಖಾಲಿ
12 ಗ್ರೂಪ್-ಡಿ 3 0 3 ಖಾಲಿ 
   ಒಟ್ಟು 22 07 15