ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ನಿರಾಶ್ರಿತರ ಆಶ್ರಯ ಸಂಖ್ಯಾಬಲ

ಕೇಂದ್ರ ಪರಿಹಾರ ಸಮಿತಿ

ಮಾಗಡಿ ಮುಖ್ಯ ರಸ್ತೆ, ಬೆಂಗಳೂರು.

 ನಿರಾಶ್ರಿತರ ಪರಿಹಾರ ಕೇಂದ್ರಗಳ ಪ್ರಾರಂಭ, ನಿರಾಶ್ರಿತರಿಗೆ ‌ಸ್ಥಳವಕಾಶ ಹಾಗೂ ಕೇಂದ್ರಗಳ ವ್ಯಾಪ್ತಿಗೊಳಪಡುವ ಇತರೆ ಜಿಲ್ಲೆಗಳ ವಿವರ

             ಸರ್ಕಾರದ ಆದೇಶ ಸಂಖ್ಯೆ: ಎಸ್‍ಡಬ್ಲ್ಯೂಡಿ 5 ಎಸ್‍ಬಿಆರ್ 76 ದಿ.26.3.1976 ರಲ್ಲಿ 10 ನಿರಾಶ್ರಿತರ ಪರಿಹಾರ ಕೇಂದ್ರಗಳು ಹಾಗೂ  ಸರ್ಕಾರದ ಆದೇಶ ಸಂಖ್ಯೆ: ಸಕಇ 7 ಎಸ್‍ಬಿಆರ್ 99 ದಿ: 29-04-2000 ರಲ್ಲಿ 04 ನಿರಾಶ್ರಿತರ ಪರಿಹಾರ ಕೇಂದ್ರಗಳು ಒಟ್ಟು 14 ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಿ ನಿರ್ವಹಣೆ ಮಾಡಲಾಗುತ್ತಿದೆ.

 

 

ಕ್ರ.ಸಂ

ಜಿಲ್ಲಾ ನಿರಾಶ್ರಿತರ ಪರಿಹಾರ ಕೇಂದ್ರಗಳು

ನಿರಾಶ್ರಿತರ ಪರಿಹಾರ ಕೇಂದ್ರಗಳ ವ್ಯಾಪ್ತಿಗೊಳಪಡುವ ಇತರೆ ಜಿಲ್ಲೆಗಳು     

ನಿರಾಶ್ರಿತರನ್ನು ಇರಿಸಲು

ಕಲ್ಪಿಸಲಾದ ಸ್ಥಳಾವಕಾಶ

ಮೂಲಭೂತ ಸೌಕರ್ಯಗಳು

ಎಸ್‍ಡಬ್ಲ್ಯೂಡಿ 5 ಎಸ್‍ಬಿಆರ್ 76 ದಿ.26-03-1976            

1 ಬೆಂಗಳೂರು   ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, 800     

ಎಲ್ಲಾ ನಿರಾಶ್ರಿತರ ಪರಿಹಾರ ಕೇಂದ್ರಗಳು ಮೂಲಭೂತ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡಗಳನ್ನು ಹೊಂದಿರುತ್ತವೆ.         

2 ಹುಬ್ಬಳ್ಳಿ-ಧಾರವಾಡ   ಹು-ಧಾರವಾಡ, ಹಾವೇರಿ, ಗದಗ  175    
3 ಮೈಸೂರು   ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು 500   
4 ದಕ್ಷಿಣ ಕನ್ನಡ  ದಕ್ಷಿಣ ಕನ್ನಡ, ಉಡುಪಿ   100   
5 ಬೆಳಗಾವಿ  ಬೆಳಗಾವಿ, ಉತ್ತರಕನ್ನಡ  100 
6 ಕಲ್ಬುರ್ಗಿ  ಕಲ್ಬುರ್ಗಿ, ಬೀದರ್   150
7 ಬಳ್ಳಾರಿ ಬಳ್ಳಾರಿ, ಕೊಪ್ಪಳ, ವಿಜಯನಗರ.   200     
8 ದಾವಣಗೆರೆ  ದಾವಣಗೆರೆ  250   
9 ವಿಜಯಪುರ ವಿಜಯಪುರ, ಬಾಗಲಕೋಟೆ 175  
10 ಶಿವಮೊಗ್ಗ ಶಿವಮೊಗ್ಗ, ಚಿಕ್ಕಮಗಳೂರು   300    
ಸಕಇ 7 ಎಸ್‍ಬಿಆರ್ 99 ದಿ.29-04-2000                
11 ತುಮಕೂರು  ತುಮಕೂರು, ಹಾಸನ 500       
12 ಕೋಲಾರ   ಕೋಲಾರ, ಚಿಕ್ಕಬಳ್ಳಾಪುರ 100    
13 ಚಿತ್ರದುರ್ಗ ಚಿತ್ರದುರ್ಗ    300     
14 ರಾಯಚೂರು ರಾಯಚೂರು 150    
     ಒಟ್ಟು 3800        

                                  

          ಸರ್ಕಾರಿ ಆದೇಶ ಸಂಖ್ಯೆ: ಸಕಇ: 07: ಎಸ್‍ಬಿಆರ್: 2017 ಬೆಂಗಳೂರು ದಿನಾಂಕ:21-04-2017 ರಲ್ಲಿ ಚಾಮರಾಜನಗರ, ಹಾಸನ, ಹಾವೇರಿ, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ  ಹೆಚ್ಚುವರಿಯಾಗಿ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಹೊಸದಾಗಿ ಪ್ರಾರಂಭಿಸಲು ಸರ್ಕಾರ ಮಂಜೂರಾತಿ  ನೀಡಿ ಆದೇಶಿಸಿದೆ.

 

ಚಾಮರಾಜನಗರ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ:ಎಲ್‍ಎನ್‍ಡಿ/ಸಿಆರ್ 147 :15-16 ದಿನಾಂಕ: 09.2.2016 ಚಾಮರಾಜನಗರ ಚಾಮರಾಜನಗರ ಜಿಲ್ಲೆ ಹಾಗೂ ತಾಲ್ಲೂಕಿನ ಯಡಪುರಗ್ರಾಮದ ಸರ್ವೆ 341 ರಲ್ಲಿ 5.05 ಎಕರೆ  ಜಮೀನು ಮಂಜೂರು ಮಾಡಿದ್ದು, ನಿರಾಶ್ರಿತರ ಪರಿಹಾರ ಕೇಂದ್ರ  ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ. ಕಟ್ಟಡ ಕಾಮಗಾರಿಗಳು ಮುಕ್ತಾಯ ಹಂತದಲ್ಲಿರುತ್ತವೆ.

 

 ಜಿಲ್ಲಾಧಿಕಾರಿಗಳು, ಕೊಪ್ಪಳ ಜಿಲ್ಲೆ ಇವರ ಆದೇಶ ಸಂಖ್ಯೆ: ಕಂದಾಯ/ ಭೂಮಿ/ 28/ 119/ 2018/ ಕ.ಸಂ/ 20772/ 4447 ದಿ: 19-12-2018 ರಲ್ಲಿ ಕೊಪ್ಪಳ ತಾಲ್ಲೂಕಿನ ಹಿರೇಕಾಸನಕಂಡಿ ಗ್ರಾಮದ ಪರಂಪೋಕ ಸರ್ವೆ ನಂ 13/ಪಿ2 ವಿಸ್ತೀರ್ಣ 191.20 ಎಕರೆ ಜಮೀನಿನ ಪೈಕಿ 05 ಎಕರೆ ಜಮೀನನ್ನು ಭಿಕ್ಷುಕರ ಪುನರ್ವಸತಿ ಕಟ್ಟಡ ನಿಮಾರ್ಣಕ್ಕಾಗಿ ಮಂಜೂರು ಮಾಡಲಾಗಿದೆ. ಹೊಸದಾಗಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲು ಅಗತ್ಯ ಮೂಲಭೂತ ಸೌಕರ್ಯಗಳ ಕಟ್ಟಡಗಳ ನಿರ್ಮಾಣ ಮಾಡಲು ಕ್ರಮವಹಿಸಲಾಗುತ್ತಿದೆ.

 

ಜಿಲ್ಲಾಧಿಕಾರಿಗಳು, ಹಾವೇರಿ ಜಿಲ್ಲೆ ರವರ ಆದೇಶ ಸಂಖ್ಯೆ: ಎಲ್.ಜಿ.ಎಲ್.ವಹಿ:38:2016-17 ದಿನಾಂಕ: 15-06-2022 ಹಾಗೂ ತಿದ್ದುಪಡಿ ಆದೇಶ ದಿನಾಂಕ:15-09-2022 ರನ್ವಯ ಹಾವೇರಿ ಜಿಲ್ಲೆ, ಹಾವೇರಿ ತಾಲ್ಲೂಕು, ಕಳ್ಳಿಹಾಳ ಗ್ರಾಮದ ರಿಸನಂ:15 ಕ್ಷೇತ್ರ 44 ಎಕರೆ 30 ಗುಂಟೆ ಪೈಕಿ 09ಎಕರೆ 20ಗುಂಟೆ ಜಮೀನನ್ನು ಕಾರ್ಯುದರ್ಶಿ, ಕೇಂದ್ರ ಪರಿಹಾರ ಸಮಿತಿ ಹೆಸರಿನಲ್ಲಿ ಮಂಜೂರಾತಿ ನೀಡಲಾಗಿದೆ. ಹೊಸದಾಗಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲು ಅಗತ್ಯ ಮೂಲಭೂತ ಸೌಕರ್ಯಗಳ ಕಟ್ಟಡಗಳ ನಿರ್ಮಾಣ ಮಾಡಲು ಕ್ರಮವಹಿಸಲಾಗುತ್ತಿದೆ.

 

ಯಾದಗಿರಿ ಜಿಲ್ಲಾಧಿಕಾರಿಗಳು ಯಾದಗಿರಿ ಜಿಲ್ಲೆ ರವರ ಆದೇಶ ಸಂಖ್ಯೆ: ಕಂ/ ಭೂಮಂ/ 40/ 2019-20/ 1702  ದಿ: 10.10.2019 ರಲ್ಲಿ ಯಾದಗಿರಿ ಜಿಲ್ಲೆಯ ಶಾಹಪೂರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಸರ್ವೆ 419 ರಲ್ಲಿ 10.00 ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ನಿರಾಶ್ರಿತರ ಪರಿಹಾರ ಕೇಂದ್ರ ಪ್ರಾರಂಭಿಸಲು ಕ್ರಮವಹಿಸಲಾಗುವುದು.ಹೊಸದಾಗಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲು ಅಗತ್ಯ ಮೂಲಭೂತ ಸೌಕರ್ಯಗಳ ಕಟ್ಟಡಗಳ ನಿರ್ಮಾಣ ಮಾಡಲು ಕ್ರಮವಹಿಸಲಾಗುತ್ತಿದೆ.

 

ಹಾಸನ ಜಿಲ್ಲಾಧಿಕಾರಿಗಳು ಆದೇಶ ಸಂಖ್ಯೆ:ಎಲ್.ಎನ್.ಡಿ(1) 07 ದಿ:28-06-2016 ರ ಆದೇಶದಂತೆ, ಹಾಸನ ಜಿಲ್ಲೆ, ಹಾಸನ ತಾಲ್ಲೂಕು ಗೋರು ಗ್ರಾಮದ ಸರ್ವೆ ನಂ.313 ರಲ್ಲಿ 6 ಎಕರೆ ಮಂಜೂರಾಗಿದ್ದು, ಹೊಸದಾಗಿ ನಿರಾಶ‍್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲು ಮೂಲಭೂತ ಸೌಕರ್ಯಗಳ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. 

 

ಬೀದರ್ ಜಿಲ್ಲಾಧಿಕಾರಿಗಳು, ಬೀದರ್ ಜಿಲ್ಲೆ ರವರ ಆದೇಶ ಸಂಖ್ಯೆ:ಸಂ.ಕಂ.ಎಲ್.ಎನ್.ಡಿ/ಸಿಆರ್: 175: 2017-18/ 17328 ದಿ: 19.01.2018 ರಲ್ಲಿ ಬೀದರ್ ತಾಲ್ಲೂಕು ಘೋಡಂಪಳ್ಳಿ ಗ್ರಾಮದ ಸರ್ವೆ ನಂ 15 ರಲ್ಲಿ 7 ಎಕರೆ 10ಗುಂಟೆ ಜಮೀನನ್ನು ಮಂಜೂರು ಮಾಡಲಾಗಿದೆ. ಜಿಲ್ಲೆಯಲ್ಲಿ ಹೊಸದಾಗಿ ನಿರಾಶ‍್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲು ಸರ್ಕಾರದಿಂದ ಅಡಳಿತಾತ್ಮಕ ಅನುಮೋದನೆ ಹಾಗೂ ಕಾರ್ಯನಿರ್ವಹಣೆಗಾಗಿ ಅಗತ್ಯ ಹುದ್ದೆಗಳ ಸೃಜಿಸಿ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿ ಪಡೆದ ನಂತರ ಕೇಂದ್ರವನ್ನು ಪ್ರಾರಂಭಿಸಲು ಮೂಲಭೂತ ಸೌಕರ್ಯಗಳ ಕಟ್ಟಡಗಳ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು.

 

ಜಿಲ್ಲಾಧಿಕಾರಿಗಳು, ಬಾಗಲಕೋಟೆ ಜಿಲ್ಲೆ ರವರ ಆದೇಶ ಸಂಖ್ಯೆ:ಜಿಅಬಾ: ಎಲ್.ಜಿ.ಎಲ್: ಸಿಆರ್:45:2021-22 ದಿನಾಂಕ: 25-03-2022 ಹಾಗೂ ದಿನಾಂಕ: 03-11-2022 ರಲ್ಲಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕು, ಬೂದಿಹಾಳ್ ಎಸ್.ಎಚ್.ಗ್ರಾಮದ ಸರ್ವೆ ನಂ.95 ರ ಕ್ಷೇತ್ರ 114 ಎಕರೆ 06 ಗುಂಟೆ ಜಮೀನಿನ ಪೈಕಿ 09 ಎಕರೆ 00ಗುಂಟೆ ಜಮೀನನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಹೊಸದಾಗಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲು ಕಾರ್ಯದರ್ಶಿ, ಕೇಂದ್ರ ಪರಿಹಾರ ಸಮಿತಿ, ಬೆಂಗಳೂರು ಹೆಸರಿನಲ್ಲಿ ಮಂಜೂರು ಮಾಡಿ ಆದೇಶಿಸಿಸಲಾಗಿದೆ. ಜಿಲ್ಲೆಯಲ್ಲಿ ಹೊಸದಾಗಿ ನಿರಾಶ‍್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲು ಸರ್ಕಾರದಿಂದ ಅಡಳಿತಾತ್ಮಕ ಅನುಮೋದನೆ ಹಾಗೂ ಕಾರ್ಯನಿರ್ವಹಣೆಗಾಗಿ ಅಗತ್ಯ ಹುದ್ದೆಗಳ ಸೃಜಿಸಿ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿ ಪಡೆದ ನಂತರ ಕೇಂದ್ರವನ್ನು ಪ್ರಾರಂಭಿಸಲು ಮೂಲಭೂತ ಸೌಕರ್ಯಗಳ ಕಟ್ಟಡಗಳ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು.

 

 ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ನಿರಾಶ‍್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಲು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಸಾವಂತವಾಡ ಹೋಬಳಿ ಮಜಾಳಿ ಗ್ರಾಮದ ಸರ್ವೆ ನಂ.482 ರಲ್ಲಿ 01ಎಕರೆ 20 ಗುಂಟೆ ಜಮೀನನ್ನು ಗುರುತಿಸಲಾಗಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ ರವರ ಮಂಜೂರಾತಿ ಹಂತದಲ್ಲಿದೆ. ಜಮೀನು ಮಂಜೂರಾದ ನಂತರದಲ್ಲಿ ಹೊಸದಾಗಿ ನಿರಾಶ‍್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲು ಸರ್ಕಾರದಿಂದ ಅಡಳಿತಾತ್ಮಕ ಅನುಮೋದನೆ ಹಾಗೂ ಕಾರ್ಯನಿರ್ವಹಣೆಗಾಗಿ ಅಗತ್ಯ ಹುದ್ದೆಗಳ ಸೃಜಿಸಿ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಮಂಜೂರಾತಿ ಪಡೆದ ನಂತರ ಕೇಂದ್ರವನ್ನು ಪ್ರಾರಂಭಿಸಲು ಮೂಲಭೂತ ಸೌಕರ್ಯಗಳ ಕಟ್ಟಡಗಳ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು.