ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ನಮ್ಮ ಬಗ್ಗೆ

ಕೇಂದ್ರ ಪರಿಹಾರ ಸಮಿತಿ

       ರಾಜ್ಯದಲ್ಲಿ  ಭಿಕ್ಷಾಟನೆಯನ್ನು  ತಡೆಗಟ್ಟುವ  ಉದ್ದೇಶದಿಂದ  ಅಂದಿನ  ಮೈಸೂರು  ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ರವರು ಸರ್ಕಾರದ ಆದೇಶ ಸಂಖ್ಯೆ:ಪಿ:4339 ದಿ.9-12-1944 ರಲ್ಲಿ ಬೆಂಗಳೂರು - ಮಾಗಡಿ ಮುಖ್ಯರಸ್ತೆಯ ಶ್ರೀಗಂಧದಕಾವಲು ಹಾಗೂ ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂಬರ್‍ಗಳಲ್ಲಿ 300.03 ಎಕರೆ  ಜಮೀನನ್ನು  ಮಂಜೂರು ಮಾಡಿ ಆದೇಶ ಹೊರಡಿಸಿದೆ. ದಿ:01.07.1948 ರಲ್ಲಿ ಕಟ್ಟಡಗಳ ಶಂಕುಸ್ಥಾಪನೆ ಮಾಡಿ  ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭ ಮಾಡಲಾಗಿದೆ. ನಂತರ ಸರ್ಕಾರದ ಆದೇಶ ಸಂಖ್ಯೆ:ಆರ್‍ಡಿ 238/ಎಕ್ಯೂಬಿ 76 ದಿ.06.12.1976 ರಲ್ಲಿ ಶ್ರೀಗಂಧಕಾವಲು ಗ್ರಾಮದ 8 ಎಕರೆ ಜಮೀನನ್ನು ನಿರಾಶ್ರಿತರ ಪರಿಹಾರ ಕೇಂದ್ರಕ್ಕಾಗಿ ಸರ್ಕಾರವು ಮಂಜೂರು ಮಾಡಿ ಆದೇಶ ಹೊರಡಿಸಿದ್ದು,  ಒಟ್ಟು 308.03 ಎಕರೆ ಜಮೀನನ್ನು ನೀಡಲಾಗಿದೆ. ಈ ಪೈಕಿ 144.04 ಎಕರೆ ಜಮೀನನ್ನು ವಿವಿಧ ಇಲಾಖಾ/ ಸಂಸ್ಥೆಗಳಿಗೆ ಗುತ್ತಿಗೆ/ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ಒಟ್ಟು 165.19 ಎಕರೆ ಜಮೀನು ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರದ ವಶದಲ್ಲಿರುತ್ತದೆ.     

         ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಭಿಕ್ಷಾಟನಾ ನಿಷೇಧ ಕಾಯಿದೆ1975 ಜಾರಿಯಲ್ಲಿದ್ದು, ಭಿಕ್ಷಾಟನೆಯನ್ನು ನಿಷೇಧಿಸಲಾಗಿದೆ. ಸರ್ಕಾರದ ಅಧಿಸೂಚನೆ ಸಂಖ್ಯೆ: ಎಸ್.ಡಬ್ಲ್ಯುಡಿ:15:ಎಸ್‍ಬಿಆರ್:97 ದಿನಾಂಕ:28-08-1997 ರಲ್ಲಿ ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ ಕಾಯಿದೆಯನ್ನು ದಿನಾಂಕ:28-08-1997 ರಿಂದ ಜಾರಿಗೆ ಬರುವಂತೆ, ರಾಜ್ಯಾದಾದ್ಯಂತ ವಿಸ್ತರಿಸಿದೆ. ಆ ಮೇರೆಗೆ ಭಿಕ್ಷಾಟನೆಯಲ್ಲಿ ನಿರತರಾದ ವ್ಯಕ್ತಿಗಳನ್ನು ಕಾಯ್ದೆಯಡಿ ಬಂಧಿಸಿ, ನಿಯಮಾನುಸಾರ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿರಿಸಿ ಪರಿಹಾರ/ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದರಿ ಅಧಿನಿಯಮದನ್ವಯ ಭಿಕ್ಷಾಟನೆಯಲ್ಲಿ ತೊಡಗಿರುವ 16 ವರ್ಷಗಳ ಮೇಲ್ಪಟ್ಟ ಹುಡುಗ ಅಥವಾ 18 ವರ್ಷಗಳ  ಮೇಲ್ಪಟ್ಟ ಹುಡುಗಿಯರನ್ನು ರಕ್ಷಿಸಿ ನಿಯಮಾನುಸಾರ ತಾಲ್ಲೂಕು ದಂಡಾಧಿಕಾರಿಗಳ ಆದೇಶ ಪಡೆದು ಭಿಕ್ಷುಕರ/ ನಿರಾಶ್ರಿತರ ಪರಿಹಾರ ಕೇಂದ್ರಗಳ ರಕ್ಷಣೆಯಲ್ಲಿ ಇರಿಸಿ ಉಚಿತವಾಗಿ ಉಪಹಾರ, ಊಟ, ಸಮವಸ್ತ್ರ, ಹಾಸಿಗೆ-ಹೊದಿಕೆ, ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿರುವ ನಿರಾಶ್ರಿತರುಗಳು ಬಿಡುಗಡೆಯಾದ ನಂತರ ಮತ್ತೆ ಭಿಕ್ಷಾಟನಾ ವೃತ್ತಿಗೆ ಮರಳಬಾರದೆಂಬ ಉದ್ದೇಶದಿಂದ ವಿವಿಧ ವೃತ್ತಿಪರ ತರಬೇತಿಗಳಾದ ಹೊಲಿಗೆ, ಕೃಷಿ ಮತ್ತು ತೋಟಗಾರಿಕೆ, ಪಶುಸಂಗೋಪನೆ, ಕುರಿಸಾಕಾಣಿಕೆ,  ಹ್ಯಾಂಡ್ ಲೂಮ್ ಮತ್ತು ಪವರ್ ಲೂಮ್, ಕೈಮಗ್ಗ, ಸಿದ್ದ ಉಡುಪು ತಯಾರಿಕೆ, ತೆಂಗಿನನಾರಿನ ಮ್ಯಾಟ್ ತಯಾರಿಕೆ, ಫೆನಾಯಿಲ್, ಸೋಪ್ ಪೌಡರ್, ಬ್ಲಿಚಿಂಗ್ ಪೌಡರ್, ಇತ್ಯಾದಿ ಗೃಹೋಪಯೋಗಿ ವಸ್ತುಗಳ ತಯಾರಿಕೆ ಹಾಗೂ ಫೈಲ್ ರಾಪರ್ ತಯಾರಿಕಾ ಘಟಕಗಳಲ್ಲಿ ತರಭೇತಿ ನೀಡಲಾಗುತ್ತಿದೆ.

        ಕರ್ನಾಟಕ ಭಿಕ್ಷಾಟನಾ ನಿಷೇಧ ಕಾಯ್ದೆ 1975 ಸೆಕ್ಷನ್(31) ರನ್ವಯ ಸ್ಥಳೀಯ ಪ್ರಾಧಿಕಾರಗಳು /ಸಂಸ್ಥೆಗಳು ಭೂಮಿ ಮತ್ತು ಕಟ್ಟಡಗಳ ಮೇಲೆ ವಿಧಿಸುವ ತೆರಿಗೆಗಳಲ್ಲಿ 3% ಭಿಕ್ಷುಕರ ಕರ ವಸೂಲಾತಿ ಆದ ಬಾಬ್ತಿನಲ್ಲಿ  ಶೇ.10 ಆಡಳಿತ ವೆಚ್ಚ ಕಡಿತಗೊಳಿಸಿ ಉಳಿಕೆ ಪಾವತಿಸಲಾಗುವ ಭಿಕ್ಷುಕರ ಉಪಕರದಿಂದ ಕಾಯ್ದೆಯನ್ವಯ ಕೇಂದ್ರ ಪರಿಹಾರ ಸಮಿತಿ ಮತ್ತು ಇದರ ಅಧೀನಕ್ಕೊಳಪಡುವ 14 ಜಿಲ್ಲಾ ನಿರಾಶ್ರಿತರ ಪರಿಹಾರ ಕೇಂದ್ರಗಳ ಮೂಲಭೂತ ಸೌಕರ್ಯ, ವೇತನ, ಅಭಿವೃದ್ದಿ ಹಾಗೂ ನಿರಾಶ್ರಿತರುಗಳ ನಿರ್ವಹಣೆಗಾಗಿ ವಿನಿಯೋಗಿಸಲಾಗುತ್ತಿದೆ.

 ​  ಸರ್ಕಾರದ ಅಧಿಸೂಚನೆ ಸಂಖ್ಯೆ:ಎಸ್‍ಡಬ್ಲ್ಯುಡಿ:15:ಎಸ್.ಬಿ.ಆರ್​:97 ದಿನಾಂಕ:24-03-20​00 ರಲ್ಲಿ ರಾಜ್ಯಾದಾದ್ಯಂತ ದಿನಾಂಕ:01-04-2000 ರಿಂದ ಜಾರಿಗೆ ಬರುವಂತೆ ಭಿಕ್ಷುಕರ ಕರವನ್ನು ವಿಧಿಸಿ ಸ್ಥಳೀಯ ಸಂಸ್ಥೆಗಳಿಂದ ವಸೂಲಿ ಮಾಡಿ ಕೇಂದ್ರ ಪರಿಹಾರ ಸಮಿತಿಗೆ ಜಮಾ ಮಾಡಲು ಸೂಚಿಸಲಾಗಿದೆ.

 ​       ಹಾಲಿ ರಾಜ್ಯದ್ಯಂತ 1)ಬೆಂಗಳೂರು 2)ವಿಜರ, 3)ಬಳ್ಳಾರಿ, 4)ಬೆಳಗಾವಿ, 5)ಚಿತ್ರದುರ್ಗ, 6)ದಾವಣಗೆರೆ, 7)ಕಲ್ಬುರ್ಗಿ, 8)ಹು-ಧಾರವಾಡ, 9)ಕೋಲಾರ, 10)ಮೈಸೂರು, 11)ಮಂಗಳೂರು (ದ.ಕ), 12)ರಾಯಚೂರು,13)ಶಿವಮೊಗ್ಗ ಹಾಗೂ 14)ತುಮಕೂರು ಜಿಲ್ಲೆಗಳಲ್ಲಿ ಭಿಕ್ಷುಕರ/ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ.

         ಸರ್ಕಾರಿ ಆದೇಶ ಸಂಖ್ಯೆ:ಸಕಇ 07 ಎಸ್‍ಬಿಆರ್ 2017 ಬೆಂಗಳೂರು.ದಿನಾಂಕ:21-04-2017 ರಲ್ಲಿ ಚಾಮರಾಜನಗರ, ಹಾಸನ, ಹಾವೇರಿ, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ  ಹೆಚ್ಚುವರಿಯಾಗಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಹೊಸದಾಗಿ ಪ್ರಾರಂಭಿಸಲು ಸರ್ಕಾರ ಮಂಜೂರಾತಿ  ನೀಡಿ ಆದೇಶಿಸಿದೆ. ನಿರಾಶ್ರಿತರ ಮೂಲಭೂತ ಸೌಕರ್ಯಗಳಿಗಾಗಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ.